ಬಳ್ಳಾರಿ : ರೈತನ ಜಮೀನಿನ ಪಹಣಿ ವಿಚಾರವಾಗಿ ರೈತನಿಂದ ಇಪ್ಪತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯೇ ಎಸಿಬಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ರೈತನ ಜಮೀನಿನ ಪಹಣಿ ಸಂಬಂಧ ಪಿಡಿಒ ಬೀರಲಿಂಗ ಇಪ್ಪತ್ತೈದು ಸಾವಿರ ರೂಪಾಯಿ ಲಂಚ ಕೇಳಿದ್ದರು, ಈ ಬಗ್ಗೆ ರೈತ ನಾರಾಯಣಸ್ವಾಮಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಶುಕ್ರವಾರ ಬೆಳಗ್ಗೆ ಕಚೇರಿಯಲ್ಲಿ ಇಪ್ಪತ್ತು ಸಾವಿರ ರೂಪಾಯಿ ಪಡೆಯುತ್ತಿರುವಾಗಲೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಧಿಕಾರಿಯನ್ನು ಬಂಧಿಸಿದ್ದಾರೆ, ಈ ಸಂಬಂಧ ಪಿಡಿಒ ಭೀರಲಿಂಗ , ಗ್ರಾಮ ಪಂಚಾಯ್ತಿ ಸದಸ್ಯ ಒ . ಬಿ . ಕಲ್ಲಣ್ಣ , ಭೀಮೇಶ್ ಮೇಲೆ ಪ್ರಕರಣ ದಾಖಲಾಗಿದೆ .
ಖಾಸಗಿ ವ್ಯಕ್ತಿಯ ಶೆಡ್ ನಲ್ಲಿ ಹಣ ಪಡೆಯುತ್ತಿದ್ದ ಮೂವರನ್ನೂ ಬಂಧಿಸಲಾಗಿದ್ದು ಸದ್ಯ ಈ ಸಂಬಂಧ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ರಾವ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.