ಗುಮಚನಮರಡಿ; ಮೂಢನಂಬಿಕೆ ವಿರುದ್ಧ ಸದಾ ಜಾಗೃತಿ ಮೂಡಿಸುವ ಮಾಜಿ ಸಚಿವ ಹಾಗೂ ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ಸ್ವಚ್ಛತೆಯ ಬಗ್ಗೆಯೂ ಈಗ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.ಹುಕ್ಕೇರಿ ತಾಲ್ಲೂಕಿನ ಗುಮಚನಮರಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೂ ಸಹ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯುವಕರ ತಂಡ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಬಣ್ಣ ಬಳಿದು ಮಧುಮಗಳ ರೀತಿ ಸಿಂಗರಿಸಿದ್ದು ಬಸ್ ನಿಲ್ದಾಣ ಈಗ ಮಿಂಚುತ್ತಿದೆ.
ಇದೇ ರೀತಿಯಾಗಿ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಫೌಂಡೇಶನ್ ಮತ್ತಷ್ಟು ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಲಿ ಎಂದು ಆಶಿಸೋಣ.