ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಬುಮ್ರಾ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದ್ದು ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.
ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಪ್ರವಾಸಿ ಭಾರತೀಯ ತಂಡ ಆಂಗ್ಲರ ವಿರುದ್ಧ ಮುನ್ನಡೆ ಸಾಧಿಸಿ ಅಥವಾ ಡ್ರಾ ಮಾಡಿಕೊಂಡು ಸರಣಿ ಜಯಿಸುವತ್ತ ಹೆಜ್ಜೆ ಹಾಕಿದೆ, ಆದರೆ ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ವಿಶ್ವಾಸದಲ್ಲಿರುವ ಬೆನ್ ಸ್ಟೋಕ್ ನಾಯಕತ್ವದ ತಂಡವು ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಸಮಬಲದತ್ತ ಚಿತ್ತ ಹರಿಸಿದೆ.
ಐಪಿಎಲ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡು ಇಂಗ್ಲೆಂಡ್ ಗೆ ತೆರಳಿದ್ದ ಟೀಂ ಇಂಡಿಯಾಗೆ ದೊಡ್ಡ ಆಘಾತ ಅನುಭವಿಸಿತು, ತಂಡದ ನಾಯಕ, ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೋವಿಡ್ ನಿಂದ ಬಳಲುತ್ತಿದ್ದು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿದೆ.
ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿರುವ ಜಸ್ಪ್ರಿತ್ ಬುಮ್ರಾ ಮೋಡಿ ಮಾಡಲಿದ್ದಾರೆಯೇ ಕಾಯ್ದು ನೋಡಬೇಕಾಗಿದೆ, ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಮಾಜಿ ನಾಯಕ, ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಸಿಡಿಸಿದರೆ ಹಾಗೂ ಬೌಲಿಂಗ್ ವಿಭಾಗದಿಂದಲೂ ಉತ್ತಮ ಪ್ರದರ್ಶನ ನೀಡಿದರೆ ಭಾರತದ ಗೆಲುವು ಸಾಧಿಸಲಿದೆ.