ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯ ಇಡಿ ವಿಶೇಷ ನ್ಯಾಯಾಲಯ ಮುಂದೆ ಹಾಜರಾಗಲಿದ್ದಾರೆ.
ಚಾರ್ಜ್‌ಶೀಟ್ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಇಡಿ ಸಮನ್ಸ್ ನೀಡಿತ್ತು. ಡಿಕೆಶಿ, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ, ರಾಜೇಂದ್ರಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಶಿವಕುಮಾರ್ ವಿಚಾರಣೆಗ ಹಾಜರಾಗಲಿದ್ದು, ಡಿಕೆಶಿ ಜೊತೆ ಇವರು ವಿಚಾರಣೆಗೆ ಹಾಜರಾಗಲಿದ್ದಾರೆ.
ದೆಹಲಿಯ ಸಪ್ದರ್ ಜಂಗ್ ಎನ್ ಕ್ಲೇವ್ನಲ್ಲಿರುವ ಡಿಕೆಶಿ ಪ್ಲಾಟ್ನಲ್ಲಿ 8.5 ಕೋಟಿ ಹಣ ಪತ್ತೆಯಾಗಿತ್ತು. ಐಟಿ ದಾಳಿ ವೇಳೆ ಅಕ್ರಮ ಹಣ ಪತ್ತೆಯಾಗಿತ್ತು. ಹವಾಲಾ ಹಣವೆಂಬ ಹಿನ್ನೆಲೆಯಲ್ಲಿ ಇಡಿ ವ್ಯಾಪ್ತಿಗೆ ನೀಡಲಾಗಿತ್ತು.