ಆಸ್ಕರ್ 2022 ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಜಗತ್ತಿನಾದ್ಯಂತ 397 ಮಂದಿಗೆ ಆಹ್ವಾನ

ಆಸ್ಕರ್ ಪ್ರಶಸ್ತಿ ಪಡೆಯುವುದು ಎಷ್ಟು ಸಂತೋಷ ಹಾಗೂ ಗೌರವದ ವಿಷಯವೋ ಅಷ್ಟೇ ಗೌರವ ಹಾಗೂ ಸಂತೋಷದ ವಿಷಯ ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆಯುವುದು ಆಗಿದೆ, ಆಗಾದರೆ ಈ ಸಮಿತಿಯಲ್ಲಿ ಸ್ಥಾನ ಪಡೆದ ಸಿನಿಮಾ ತಾರೆಯರು ಯಾರು ಗೊತ್ತೇ?

ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ಬ್ಯೂಟಿ ಕಾಜೊಲ್ ಅವರಿಗೆ ಈ ವಿಶೇಷ ಗೌರವ ದೊರೆತಿದ್ದು ಈ ಇಬ್ಬರೂ ಭಾರತೀಯ ಸಿನಿ ತಾರೆಯರು ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದ್ದು ನಟ ಹಾಗೂ ನಟಿಯರ ಗೌರವ ಹೆಚ್ಚಾಗಿದೆ.

ತಮಿಳು ಚಿತ್ರರಂಗದಲ್ಲಿ ಉತ್ತಮ ಹೆಸರುಗಳಿಸಿರುವ ನಟ ಸೂರ್ಯ ಭಾರತೀಯ ಚಿತ್ರರಂಗದ ಕೆಲವೇ ಕೆಲವು ವರ್ಸಟೈಲ್ ಸ್ಟಾರ್ ಹೀರೋಗಳಲ್ಲಿ ಒಬ್ಬರು, ನಾಯಕನಾಗಿ, ವಿಲನ್ ಪಾತ್ರಗಳಲ್ಲೂ ಮಿಂಚಬಲ್ಲ ಅದ್ಭುತ ನಟ.

ಸೂರ್ಯ ಅಭಿನಯದ ಜೈ ಭೀಮ್ ಮತ್ತು ಸುರರೈ ಪೋಟ್ರು ಚಿತ್ರಗಳು ಆಸ್ಕರ್ ತನಕ ತಲುಪಿತ್ತು ಇದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಸೂರ್ಯ ಅವರಿಗೆ ಮತ್ತೆ ಆಸ್ಕರ್ ಅಕಾಡೆಮಿಯಿಂದ ಕರೆ ಬಂದಿರುವುದು ದೃಢಪಟ್ಟಿದೆ.

ಆಸ್ಕರ್ 2022 ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಜಗತ್ತಿನಾದ್ಯಂತ 397 ಮಂದಿಗೆ ಆಹ್ವಾನ ಬಂದಿದ್ದು, ಅವರಲ್ಲಿ ಹೀರೋ ಸೂರ್ಯ ಮತ್ತು ನಟಿ ಕಾಜೊಲ್ ಅವರಿಗೂ ಸಹ ಆಮಂತ್ರಣ ಬಂದಿದ್ದು ಭಾರತದಿಂದ ಈ ಇಬ್ಬರು ಸಿನಿ ತಾರೆಯರಿಗೂ ಆಸ್ಕರ್ ಆಮಂತ್ರಣ ನೀಡಿದೆ.

Discover more from Valmiki Mithra

Subscribe now to keep reading and get access to the full archive.

Continue reading