ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗಲಿ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಸಮಾಜದ ಕಟ್ಟ ಕಡೆಯ ಅರ್ಹ ವ್ಯಕ್ತಿಗಳಿಗೂ ಕೂಡ ಸರ್ಕಾರದಿಂದ ಕೊಡ ಮಾಡುವಂತಹ ಸೌಲಭ್ಯಗಳನ್ನು ಪರಿಪೂರ್ಣವಾಗಿ ತಲುಪಿಸಿದಾಗ ಮಾತ್ರ ಅಧಿಕಾರಿ ಮತ್ತು ನೌಕರರ ಸೇವೆ ಸಾರ್ಥಕವಾಗುತ್ತದೆ ಎಂದು ತಹಶೀಲ್ದಾರ್ ಎನ್ . ರಘುಮೂರ್ತಿ ಹೇಳಿದರು .

ಗುರುವಾರ ನಾಯಕನಹಟ್ಟಿ ಪಟ್ಟಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇನ್ನೂ ಅದೆಷ್ಟು ಜನರು ಹಲವಾರು ಕಾರಣಗಳಿಂದ ಸರ್ಕಾರಿ ಸೌಲಭ್ಯವನ್ನು ಪಡೆದಿಲ್ಲ ಇಂತಹ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಅಧಿಕಾರಿ ನೌಕರರಿಂದ ಮಾತ್ರವಲ್ಲದೆ ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಯವರು ಮತ್ತು ವಿದ್ಯಾವಂತರಿಂದಲೂ ಆಗಬೇಕಿದೆ ಎಂದರು.

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಮಾಜದ ಋಣವನ್ನು ನಾವು ತೀರಿಸಿದಂತೆ ಆಗುತ್ತದೆ, ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾವಂತರು ಬಡವರು ಮತ್ತು ಅಸಹಾಯಕರು ಇರುವುದರಿಂದ ಇಂತಹ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀರಾಮುಲು ಸೂಚಿಸಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ಸೌಲಭ್ಯವಂಚಿತರು ತಾಲೂಕಿನಲ್ಲಿ ಇಲ್ಲದ ಹಾಗೆ ಮಾಡುವ ಕೆಲಸವನ್ನು ತಾಲೂಕ ಆಡಳಿತ ಕೈಗೊಂಡಿದ್ದು ಇದಕ್ಕೆ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಈ ಭಾಗದಲ್ಲಿ ಈಗಾಗಲೇ ಸಾವಿರಾರು ಪದವೀಧರರಿಗೆ ಉಚಿತವಾಗಿ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯವನ್ನು ಪ್ರಯೋಜಿಕತ್ವದ ಮುಖಾಂತರ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಆಶಯದಂತೆ ಒದಗಿಸಲಾಗಿದೆ ಮುಂದೆಯೂ ಕೂಡ ಇಂಥ ಕಾರ್ಯಗಳು ತಾಲೂಕ ಆಡಳಿತದಿಂದ ನಡೆಯುತ್ತವೆ ನಾಗರೀಕರು ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಚಳ್ಳಕೆರೆ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ನೌಕರರ ಬದ್ಧತೆಯಿಂದ ಮತ್ತು ಕ್ರೀಯಾ ತ್ಮಯಾತ್ಮಕ ಕೆಲಸದಿಂದ ಚಿತ್ರದುರ್ಗ ಜಿಲ್ಲೆ ಮತ್ತು ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದೆ, ಇನ್ನೂ ಹೆಚ್ಚು ಕಾರ್ಯಗಳು ತಾಲೂಕಿನ ಕಂದಾಯ ಇಲಾಖೆಯಿಂದ ನಡೆಯಬೇಕು, ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 50 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ಸಮಾರಂಭದಲ್ಲಿ ನಾಯಕನಹಟ್ಟಿ ನಾಡಕಚೇರಿ ಉಪತಾಶಿಲ್ದಾರ್ ಸುಧಾ , ರಾಜಸ್ವ ನಿರೀಕ್ಷಕರಾದ ಚೇತನ್ ಕುಮಾರ್, ಗ್ರಾಮ ಲೆಕ್ಕಧಿಕಾರಿಗಳಾದ ಹರೀಶ್, ಉಮಾ ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading