ಬೆಂಗಳೂರು: ಪ್ರಧಾನಿ ಮೋದಿ ಅವರ ಹತ್ತಿರ ಇದ್ದವರಿಗೆ ಅವರ ಪ್ರೀತಿ, ವಿಶ್ವಾಸ ಗೊತ್ತು ಹಾಗೂ ಬಡವರ ಬಗ್ಗೆ ಮಿಡಿಯುವ ವ್ಯಕ್ತಿ ಆಶ್ರಯದಾತನಾಗಿ ಭರವಸೆ ಮೂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪಟ ದೇಶಾಭಿಮಾನಿ ಅವರ ಬಾಲ್ಯದ ಕಷ್ಟದಿಂದ ಕೂಡಿತ್ತು, ಗುಜರಾತಿನ ಸ್ಟೇಷನ್ ನಲ್ಲಿ ಟೀ ಮಾರುತ್ತಿದ್ದವರು, ಬಡತನ ಅಪಮಾನ ಅನುಭವಿಸಿದ ವ್ಯಕ್ತಿಯಾಗಿ, ತತ್ವ ಆದರ್ಶ ಬೆಳಸಿಕೊಂಡಿರುವ ವ್ಯಕ್ತಿ ಎಂದು ಹೇಳಿದರು .
ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದಾರೆ ಆತ್ಮ ವಿಕಾಸಕ್ಕಾಗಿ, ಜ್ಞಾನದ ಉದ್ದೇಶಕ್ಕಾಗಿ ಹಿಮಾಲಯ ಕೂತುಗಳು, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ ಹಸಿವು ಮತ್ತು ಬಡತನವನ್ನು ಸ್ವತಃ ಮೋದಿ ಅವರು ಅನುಭವಿಸಿದ್ದರು ಎಂದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಮೋದಿ@ 20 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಮುರುಗನ್ , ಸಚಿವರಾದ ಬಿಸಿ ಪಾಟೀಲ್, ಅಶ್ವತ್ ನಾರಾಯಣ್, ವಿ ಸೋಮಣ್ಣ, ಸುನಿಲ್ ಕುಮಾರ್ ಶಾಸಕ ಗರುಡಾಚಾರ್ ಭಾಗವಹಿಸಿದ್ದರು.