ಮುಂಬೈ: ಎರಡುವರೆ ವರ್ಷಗಳಿಂದ ಅಧಿಕಾರದಲ್ಲಿದ್ದ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದ ಮಹಾವಿಕಾಸ್ ಅಘಾಡಿ ಸರ್ಕಾರ ಮುಖ್ಯಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ.
ತನ್ನದೇ ಪಕ್ಷದ ಪ್ರಮುಖ ನಾಯಕ ಏಕನಾಥ್ ಶಿಂಧೆ ನಾಯಕತ್ವದಲ್ಲಿ 35ಕ್ಕೂ ಹೆಚ್ಚು ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದು ಮೊದಲು ಸೂರತ್ ನಂತರ ಅಸ್ಸಾನ್ನ ಗುವಾಹಟಿಗೆ ತೆರಳಿದ್ದರು. ಸಿಎಂ ಠಾಕ್ರೆ ಹಾಗೂ ವಕ್ತಾರ ಸಂಜಯ್ ರಾವತ್ ಹಲವು ಬಾರಿ ಮನವಿ ಮಾಡಿದರೂ ಸಹ ಶಾಸಕರು ವಾಪಸ್ ಬಂದಿರಲಿಲ್ಲ.
ಈ ನಡುವೆ ಶಿವಸೇನಾ ಪಕ್ಷ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಡೆಪ್ಯುಟಿ ಸ್ಪೀಕರ್‌ಗೆ ಮನವಿ ಸಲ್ಲಿಸಿದರು ಆದರೆ ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ಅನರ್ಹತೆ ಮಾಡದಂತೆ ಸೂಚನೆ ನೀಡಿತ್ತು, ಇತ್ತ ರಾಜ್ಯಪಾಲರು ಜೂನ್ 30 ರಂದು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿದ್ದರು.
ರಾಜ್ಯಪಾಲರ ಸೂಚನೆ ವಿರುದ್ಧ ತಡೆ ನೀಡುವಂತೆ ಸರ್ಕಾರ ಸುಪ್ರೀಂಗೆ ಅಜಿ೯ ಸಲ್ಲಿಸಿತು, ತಡೆಯಾಜ್ಞೆ ಸಲ್ಲಿಸಲು ನಿರಾಕರಿಸಿದ ಸುಪ್ರೀಂ ಗುರುವಾರವೇ ವಿಶ್ವಾಸಮತಕ್ಕೆ ಸೂಚನೆ ನೀಡಲಾಯಿತು. ರೆಬಲ್ ಶಾಸಕರು ಮರಳಿ ಬರುವ ಯಾವುದೇ ಮುನ್ಸೂಚನೆ ಇಲ್ಲದೆ ಇರುವ ಕಾರಣ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ.
ಅತಿ ಹೆಚ್ಚು ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡುವ ಸಾಧ್ಯತೆಯಿದೆ, ರೆಬಲ್ ಶಾಸಕರ ಜೊತೆಗೂಡಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಯಕತ್ವದಲ್ಲಿ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ.