ಕೆಜಿಎಫ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಯನ್ನು ಪರಿಚಯಿಸಲು ಮುಂದಾಗಿದೆ, ಕೇವಲ ಪ್ರತಿಭೆ ಮಾತ್ರವಲ್ಲ ಅವರು ಮಾಜಿ ವಿಶ್ವ ಸುಂದರಿಯೂ ಹೌದು!
ಕನ್ನಡ ಸಿನಿ ಆಸಕ್ತರಿಗೆ ಇದು ಆಶ್ಚರ್ಯವೆನಿಸಿದರೂ ಇದು ನಿಜ, ಸಾಕಷ್ಟು ನಿರೀಕ್ಷಿತ ಸಿನಿಮಾಗಳನ್ನೇ ಮಾಡುತ್ತಿರುವ ಹೊಂಬಾಳೆ ಸಂಸ್ಥೆ ಇದೀಗ ಮತ್ತೆ ಅಂತಹದೇ ಆದ ಸಿನಿಮಾ ನಿರ್ಮಿಸುತ್ತಿದ್ದು ಅವುಗಳಲ್ಲಿ ರಾಜ್ ಕುಟುಂಬದ ಯುವರಾಜ್ ಕುಮಾರ್ ಸಿನಿಮಾ ಕೂಡ ಒಂದು.
2017 ರ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಜೊತೆಗೆ ಹೊಂಬಾಳೆ ಕೈ ಜೋಡಿಸಿದೆ, ಮಾನುಷಿ ಚಿಲ್ಲರ್ ನಿರ್ಮಾಪಕ ವಿಜಯ್ ಕಿರಂಗಂದೂರು ಅವರನ್ನು ಭೇಟಿ ಮಾಡಿದ್ದು ಈ ವಿಚಾರ ಈಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.
ಅಷ್ಟಕ್ಕೂ ಮಾನುಷಿ ಚಿಲ್ಲರ್ ಇಲ್ಲಿಯ ತನಕ ಹೊಂಬಾಳೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಹೊಂಬಾಳೆ ನಿರ್ಮಾಪಕರನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ, ಇದಕ್ಕೆ ಕಾರಣ ಯುವರಾಜ್ ಸಿನಿಮಾ ಎನ್ನಲಾಗಿದೆ.
ಮಾನುಷಿ ಚಿಲ್ಲರ್ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ ಹಿನ್ನೆಲೆ, ಹೊಂಬಾಳೆ ನಿರ್ಮಾಣದ ಸಿನಿಮಾದಲ್ಲಿ ಮಾನುಷಿ ಅಭಿನಯಿಸುತ್ತಾರೆ ಎನ್ನಲಾಗುತ್ತಿದೆ. ಸದ್ಯ ಹೊಂಬಾಳೆ ಸಿನಿಮಾ ಕೈಗೆತ್ತಿಕೊಂಡಿರುವ ಚಿತ್ರಗಳಲ್ಲಿ ಬಹುನಿರೀಕ್ಷೆಯ ದೊಡ್ಡ ಸಿನಿಮಾ ಎಂದರೆ ಯುವರಾಜ್ ಕುಮಾರ್‌ಗಾಗಿ ಹೊಂಬಾಳೆ ಮಾಡುತ್ತಿರುವ ಸಿನಿಮಾವಾಗಿದೆ.
ಯುವರಾಜ್ ಕುಮಾರ್ ಜೊತೆಗೆ ನಟಿಸುವ ನಾಯಕಿ ಯಾರು ಎನ್ನುವ ಕುತೂಹಲ ಇತ್ತು. ಅದಕ್ಕೀಗ ಮಾನುಷಿ ಚಿಲ್ಲರ್ ಉತ್ತರವಾಗಿದ್ದಾರೆ. ಯುವರಾಜ್ ಕುಮಾರ್ ಮೊದಲ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ಎನ್ನಲಾಗುತ್ತಿದೆ.
ಮೊದಲು ಬಾಲಿವುಡ್ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ಅಭಿನಯಿಸಿದ್ದು ಅಕ್ಷಯ್ ಕುಮಾರ್ ಜೊತೆಗೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ, ಮಾನುಷಿ ಚಿಲ್ಲರ್ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಹುಟ್ಟಿಕೊಂಡಿತ್ತು, ಆದರೆ ಈಗ ಇವರು ಸ್ಯಾಂಡಲ್ ವುಡ್ ನಲ್ಲಿ ನಟಿಸಲಿದ್ದಾರೆ.