ಬೆಂಗಳೂರು: ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಡೆಡ್ ಲೈನ್ ನೀಡಿರುವ ಹಿನ್ನೆಲೆಯಲ್ಲಿ 6 ತಿಂಗಳಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಂದ ಮಹತ್ವದ ಸಭೆ ನಡೆಯಲಿದೆ.
ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳ ಸಭೆ ಕರೆದಿರುವ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೇರಿದಂತೆ ನಗರ ಡಿಸಿಪಿಗಳ ಸಭೆ ನಡೆಸಲಿದ್ದು ಹಲವು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಇತ್ತೀಚೆಗಷ್ಟೇ ಟ್ರಾಫಿಕ್ ಜಂಟಿ ಪೊಲೀಸ್ ಆಯಕ್ತ ರವಿಕಾಂತೇಗೌಡ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಜೊತೆ ಸಭೆ ನಡೆಸಿದ್ದು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದ್ದರು.
6 ತಿಂಗಳಲ್ಲಿ ಟ್ರಾಫಿಕ್ ಟ್ರಾಫಿಕ್ ಕಂಟ್ರೋಲ್ ಗೆ ಸಿಟಿ ಪೊಲೀಸರ ಪಣ ತೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಬಳಿಕ ಎರಡು ಮಹತ್ವ ಸಭೆ ಬೆಂಗಳೂರಲ್ಲಿ ನಡೆದಿದೆ, ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ ಬಿ, ಬೆಸ್ಕಾಂ, ನಗರ ಪೊಲೀಸರ ಸಭೆ ನಡೆದಿತ್ತು.
ಈಗಾಗಲೇ 10 ಟ್ರಾಫಿಕ್ ಜಂಕ್ಷನ್ ಗುರುತಿಸಿರುವ ಪೊಲೀಸರು ಸಿಲ್ಕ್ ಬೋರ್ಡ್ , ಜಯದೇವ, ಹೆಬ್ಬಾಳ , ಕೆ.ಆರ್‌ಪುರಂ,ಗೊರಗುಂಟೆಪಾಳ್ಯ, ಮೈಸೂರು ರಸ್ತೆ ಸೇರಿದಂತೆ 10 ಜಂಕ್ಷನ್ ನಲ್ಲಿ ಸುಗಮ ಸಂಚಾರ ನಿರ್ಮಾಣ ಕ್ರಮದ ಬಗ್ಗೆ ಚರ್ಚಿಸಲು ಹಲವಾರು ಇಲಾಖೆಗಳು ಮುಂದಾಗಬೇಕಾಗಿದೆ.