- ನೀರು, ಜ್ಯೂಸ್ ಅಥವಾ ಎಳನೀರು ಕುಡಿಯುವಾಗ ಯಾವಾಗಲೂ ಕುಳಿತುಕೊಂಡು ಕುಡಿಯಿರಿ. ನಿಂತು ಕುಡಿದರೆ ಕಿಡ್ನಿಗೆ ತೊಂದರೆಯಾಗುತ್ತದೆ ಮತ್ತು ಮಂಡಿನೋವು ಸಹ ಬರುತ್ತದೆ. ಇದನ್ನು ಮಕ್ಕಳಿಗೂ ಹೇಳಿಕೊಡಿ.
- ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, 35 ವರ್ಷದ ಮೇಲ್ಪಟ್ಟವರು ಬೆಳಗ್ಗೆ ಮತ್ತು ಮಧ್ಯಾಕ್ನ ತಿನ್ನಿರಿ. ರಾತ್ರಿ ವೇಳೆಗೆ ಒಳ್ಳೆಯದಲ್ಲ. ರಾತ್ರಿ ವೇಳೆ ಬಾಳೆಹಣ್ಣು ತಿಂದರೆ ರಕ್ತಸಂಚಾರದಲ್ಲಿ ವ್ಯತ್ಯಾಸ ಆಗುತ್ತದೆ. ಜೀರ್ಣ ಸರಿಯಾಗಿ ಆಗುವುದಿಲ್ಲ.
- ರಾತ್ರಿ ಊಟ ಆದಮೇಲೆ ಒಂದು ಸೇಬು ಹಣ್ಣು ತಿನ್ನಿರಿ ಅಥವಾ ಒಂದು ದಾಳಿಂಬೆ ತಿನ್ನಿರಿ ಅಥವಾ ಒಂದು ಕಿವಿ ಹಣ್ಣು ತಿನ್ನಿರಿ ಅಥವಾ ಎರಡು ಪೀಸ್ ಪಪ್ಪಾಯ ತಿನ್ನಿರಿ. ಆರೋಗ್ಯ ಯಾವಾಗಲೂ ಚನ್ನಾಗಿರುತ್ತದೆ.
- ರಾತ್ರಿ ಊಟ ಆದಮೇಲೆ ಒಂದು ಸೇಬು ಹಣ್ಣು ತಿನ್ನುವುದರಿಂದ ಹಲ್ಲು ಆರೋಗ್ಯವಾಗಿರುತ್ತವೆ. ನಿದ್ರೆ ಚನ್ನಾಗಿ ಬರುತ್ತದೆ ಮತ್ತು ಜ್ಞಾಪಕಶಕ್ಲೆ ವೃದ್ಧಿಯಾಗುತ್ತದೆ. ಸೇಬು ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದಿಂದ ಹೊಟ್ಟೆ ಹಾಳು ಮಾಡುತ್ತದೆ. ಊಟ ತಿಂಡಿ ಆದ ನಂತರ ಸೇಬು ಹಣ್ಣನ್ನು ತಿನ್ನಿರಿ, ಇದನ್ನು ಸಹ ಮಕ್ಕಳಿಗೆ ಹೇಳಿಕೊಡಿ.
- ಮಾವಿನ ಹಣ್ಣು: ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನ ಅಂಶ ಹೇರಳವಾಗಿರುತ್ತದೆ. ಮಾವಿನ ಹಣ್ಣನ್ನು ಖಾಲಿ ಹೊಟ್ಟೆಗೆ ತಿನ್ನಬಾರದು, ತಿಂಡಿ ಊಟ ಆದನಂತರ ತಿನ್ನಬೇಕು. ಊಟ ತಿಂಡಿ ಆದ ನಂತರ ತಿನ್ನಿರಿ, ಇದನ್ನು ಸಹ ಮಕ್ಕಳಿಗೆ ಹೇಳಿಕೊಡಿ.
- ಕಲ್ಲಂಗಡಿ: ಕಲ್ಲಗಂಡಿ ಹಣ್ಣಿನ ವಿಶೇಷತೆ ಏನೆಂದರೆ, ಇದನ್ನು ತಿನ್ನುವುದರಿಂದ ಉರಿ ಮೂತ್ರ ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಸಣ್ಣ ಕಲ್ಲು ಅಥವಾ ಮರಳು ಇದ್ದರೆ ಮೂತ್ರದಲ್ಲಿ ಹೊರಹಾಕುತ್ತದೆ. ಕಲ್ಲಂಗಡಿಹಣ್ಣನ್ನು ನಿರಂತರವಾಗಿ ವಾರದಲ್ಲಿ ಎರಡು ಬಾರಿ ತಿನ್ನುವುದರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತದೆ.
- ಶುಂಠಿ ಮತ್ತು ಬೆಳ್ಳುಳ್ಳಿ ಯನ್ನು ಅಡುಗೆಯಲ್ಲಿ ಸ್ವಲ್ಪ ಜಾಸ್ತಿಯೇ ಬಳಸಿ. ಇದರಿಂದ ಆಹಾರದ ರುಚಿ ಹೆಚ್ಚಾಗುವುದಲ್ಲದೇ, ಜೀರ್ಣಶಕ್ತಿಯೂ ಹೆಚ್ಚಾಗುತ್ತದೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿಯೂ ಜಾಸ್ತಿ ಇದೆ.
- ಪೈನಾಪಲ್ ಹಣ್ಣು ತಿನ್ನುವುದರಿಂದ ಕಫವನ್ನು ಕರಗಿಸುತ್ತದೆ ಮತ್ತು ದೇಹವನ್ನು ತಂಪಾಗಿರಿಸುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು