ಬೆಂಗಳೂರು : 1980 ರ ದಶಕದಿಂದಲೂ ರಾಜ್ಯದಲ್ಲಿ ಪ್ರತೀ ಹಳ್ಳಿಯನ್ನು ಸುತ್ತಿ ಬಿಜೆಪಿಯನ್ನು ಬಹುಮತ ಪಡೆದು ಅಧಿಕಾರಕ್ಕೆ ಬರುವಂತೆ ಮಾಡಿದ ಬಹುದೊಡ್ಡ ವ್ಯಕ್ತಿಗಳೆಂದರೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ದಿವಂಗತ, ಕೇಂದ್ರ ಸರ್ಕಾರದಲ್ಲಿ ಕನ್ನಡಿಗರ ಗಟ್ಟಿ ಧ್ವನಿಯಾಗಿದ್ದ ಮಾಜಿ ಸಚಿವ ಅನಂತ್ ಕುಮಾರ್.
ಹೌದು, ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಅವರ ರೀತಿಯೇ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಬಿಎಸ್ ವೈ ಹಾಗೂ ಅನಂತ ಕುಮಾರ್, ಆದರೆ ಅನಂತ್ ಕುಮಾರ್ ದಿವಂಗತರಾಗಿದ್ದು ಈಗ ಉಳಿದಿರುವ ಏಕೈಕ ಪ್ರಶ್ನಾತೀತಾ ನಾಯಕ ಬಿಎಸ್ ವೈ ಅವರನ್ನು ವಯಸ್ಸಿನ ಕಾರಣದಿಂದಾಗಿ ತೆರೆಮರೆಗೆ ಕಳಿಸುವ ಕೆಲಸ ನಡೆಯುತ್ತಿದೆ.
ಆದರೆ ರಾಜ್ಯದಲ್ಲಿ ಇಂದಿಗೂ ಬಿಜೆಪಿಯ ಮಾಸ್ ಲೀಡರ್ ಎಂದರೆ ಬಿಎಸ್ ವೈ, ಯಾರೇ ಬಂದರೂ ಅವರ ಇಮೇಜ್ ಕಡಿಮೆ ಆಗಿಲ್ಲ, ಆದ್ದರಿಂದಲೇ ಕಾರ್ಯಕ್ರಮಗಳ ನಿಮಿತ್ತ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಆಗಮಿಸಿದ ವೇಳೆ ಪ್ರಧಾನಿಗೆ ಬಿಎಸ್ ವೈ ಸ್ವಾಗತಿಸಿದರು.
ಸ್ವಾಗತದ ವೇಳೆ ಬಿಎಸ್ ವೈ ಕೈ ಗಟ್ಟಿಯಾಗಿ ಹಿಡಿದ ಮೋದಿ, ಹಾಗೆಯೇ ಹಿಡಿದು ಪ್ರಧಾನಿ ಕೃತಜ್ಙತೆ ಸಲ್ಲಿಸಿದರು, ಚುನಾವಣೆಗಳು ಹತ್ತಿರ ಬರುತ್ತಿರುವ ಹಿನ್ನೆಲೆ ಮೋದಿಯವರ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಬಿಎಸ್ ವೈ ಸಿಎಂ ಆಗಿದ್ದಾಗ ಮುಖ ತಿರುಗಿಸುತ್ತಿದ್ದ ಪ್ರಧಾನಿ, ಬಿಎಸ್ ವೈ ದೆಹಲಿಗೆ ಹೋದಾಗ ಭೇಟಿಗೆ ಕಾರಣಗಳನ್ನು ನೀಡಿ ಹಿಂದೇಟು ಹಾಕುತ್ತಿದ್ದರು, ಇದೀಗ ಬಿಎಸ್ ವೈ ನೋಡಿ ಹತ್ತಿರ ಬಂದು ಕೈಹಿಡಿದ ಮೋದಿ ಕುಶಲೋಪರಿ ವಿಚಾರಿಸಿದರು. ರಾಜ್ಯದಲ್ಲಿ ಬಿಎಸ್ ವೈ ಇಲ್ಲದ ಬಿಜೆಪಿ ನೆನೆಸಿಕೊಳ್ಳುವುದು ಅಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಬಿಎಸ್ ವೈ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರಾ ಎಂಬುದು ತಿಳಿಯಬೇಕಾಗಿದೆ.