ಗೆಳೆಯ ರಕ್ಷಿತ್ ಶೆಟ್ಟಿಗಿಂತ ರಿಶಬ್ ಶೆಟ್ಟಿಯೇ ಹೆಚ್ಚು ಬ್ಯುಸಿ! ಹಾಗಾದರೆ ಕೈಯಲ್ಲಿರುವ ಸಿನಿಮಾಗಳೆಷ್ಟು?

ಸ್ಯಾಂಡಲ್ ವುಡ್ ನಲ್ಲಿ ಈಗ ಕೇಳಿಬರುತ್ತಿರುವ ಪ್ರತಿಭಾವಂತ ಯುವ ನಟ ಹಾಗೂ ನಿರ್ದೇಶಕರಲ್ಲಿ ರಿಶಬ್ ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿದೆ, ಖಡಕ್ ಡೈಲಾಗ್ ಗಳು ಹಾಗೂ ಪತ್ತೆದಾರಿ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಇವರು ಅಷ್ಟೇ ಬ್ಯುಸಿ ಷೆಡ್ಯೂಲ್ ನಲ್ಲಿದ್ದಾರೆ.

ವೃತ್ತಿಪರವಾಗಿ ರಿಷಬ್ ಶೆಟ್ಟಿ ಎಂದು ಕರೆಯಲ್ಪಡುವ ಇವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ, ನಿರ್ದೇಶಕ ಮತ್ತು ನಟನಾಗಿ ಸಿನಿಮಾ ರಂಗದಲ್ಲಿರುವ ಇವರು ಕರಾವಳಿ ಮೂಲದವರು, ಜೊತೆಗೆ ಸ್ವಾಭಾವಿಕವಾಗಿ ಇವರು ಸಿನಿಮಾದಷ್ಟೇ ಯಕ್ಷಗಾನದಲ್ಲೂ ಎತ್ತಿದ ಕೈ.

ತುಗ್ಲಕ್‌ನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ ಇವರು ನಂತರ ಪವನ್ ಕುಮಾರ್ ಅವರ ಲೂಸಿಯಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಸಣ್ಣ ಪಾತ್ರವನ್ನು ನಿರ್ವಹಿಸಿದರು, ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ನಂತರದ ದಿನಗಳಲ್ಲಿ ತಮ್ಮ ಕುಚುಕು ಗೆಳೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡುತ್ತಾ ಅಟ್ಟಹಾಸ, ನಮ್ ಏರಿಯಾಲಿ ಒಂದಿನ, ಉಳಿದವರು ಕಂಡಂತೆ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಅಂಬಿ ನಿಂಗ್ ವಯಸ್ಸಾಯ್ತೋ , ಬೆಲ್ ಬಾಟಮ್ , ಕಥಾ ಸಂಗಮ, ಅವನೇ ಶ್ರೀಮನ್ನಾರಾಯಣ ಹೀರೋ , ಗರುಡ ಗಮನ ವೃಷಭ ವಾಹನ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಸೆಳೆಯುವ ಮೂಲಕ ಹಲವಾರು ಪ್ರಶ್ನೆಗಳನ್ನು ಪಡೆದಿದ್ದಾರೆ.

ಇನ್ನೂ ಕೈಯಲ್ಲಿ ಮಿಷನ್ ಇಂಪಾಸಿಬಲ್, ಕ್ಯಾಮಿಯೋ,
ಹರಿಕಥೆ ಅಲ್ಲ ಗಿರಿ, ಕಾಂತಾರ, ಬೆಲ್ ಬಾಟಮ್ 2, ಡಿಟೆಕ್ಟಿವ್ ದಿವಾಕರ, ಮಹನೀಯರೇ ಮಹಿಳೆಯರೇ,
ಅಂತಗೋಣಿ ಶೆಟ್ಟಿ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಈವರಿಗೆ ಮತ್ತಷ್ಟು ಸಿನಿಮಾಗಳು ಸಿಗಲಿ ಹಾಗೂ ಒಳ್ಳೆಯ ಹಿಟ್ ಸಿನಿಮಾಗಳಾಗಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading