ಬೆಂಗಳೂರು: ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇದೀಗ ಅಚ್ಚರಿಯ ನಡೆಯೊಂದರಲ್ಲಿ ಮಾಜಿ ಪ್ರಧಾನಿ, ಕರ್ನಾಟಕದ ಹೆಚ್.ಡಿ.ದೇವೇಗೌಡ ಅವರು ರಾಷ್ಟ್ರಪತಿ ಆಗಲಿದ್ದಾರಾ? ಎಂಬ ಪ್ರಶ್ನೆಯೊಂದು ದೆಹಲಿಯಿಂದ ರವಾನೆಯಾಗಿತ್ತು. ಹೆಚ್ ಡಿ ದೇವೇಗೌಡ ಅವರ ಹೆಸರು ರಾಷ್ಟ್ರಪತಿ ರೇಸ್ನಲ್ಲಿ ತೀವ್ರ ಮುನ್ನೆಲೆಗೆ ಬಂದಿತ್ತು.
ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ ಎಂದರು.
ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹೆಚ್. ಡಿ ದೇವೇಗೌಡ ಅವರಿಗೆ ಜೀವನದಲ್ಲಿ ಒಮ್ಮೆ ಸ್ವತಂತ್ರ ಸರ್ಕಾರ ಬರಬೇಕು ಎಂಬ ಆಸೆ ಇದೆ ಎಂದು ಅವರು ತಿಳಿಸಿದ್ದಾರೆ.