ಚನ್ನಗಿರಿ: ತಾಲೂಕಿನಲ್ಲಿಂದು ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಡಿ ಎಸ್ ಎಸ್ ಸಂಸ್ಥಾಪಕ ಪ್ರೊಫೆಸರ್ ಟಿ. ಕೃಷ್ಣಪ್ಪನವರ 85ನೇ ಜನ್ಮದಿನಾಚರಣೆಯ ಅಂಗವಾಗಿ ಎಸ್ಎಸ್ಎಲ್ ಸಿ ಯಲ್ಲಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.
ತಾಲ್ಲೂಕಿನ ಡಿಎಸ್ಎಸ್ ಸಂಚಾಲಕ ಚಿತ್ರಲಿಂಗಪ್ಪ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ಸಾಮಾಜಿಕ ಹೋರಾಟಗಾರ ಬಸವಪುರ ನಾಯಕ್ ಸೇರಿದಂತೆ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.