ರಾಜ್ ಕೋಟ್ : ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಟಿ-ಟ್ವೆಂಟಿ ಸರಣಿಯ ಐದು ಪಂದ್ಯಗಳಲ್ಲಿ 2-1 ಮುನ್ನಡೆ ಸಾಧಿಸಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿಶಾಖಪಟ್ಟಣದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಪಂತ್ ಬಳಗದ ವಿರುದ್ಧ ಮುಗ್ಗರಿಸಿದ್ದರು, ಭಾರತದ ಸಂಘಟಿತ ಹೋರಾಟದ ಫಲವಾಗಿ ಭಾರತ ತಂಡ ಸರಣಿಯನ್ನು ಉಳಿಸಿಕೊಂಡಿತ್ತು.
ಬ್ಯಾಟ್ಸ್‌ಮನ್ ಗಳ ಸ್ವರ್ಗ ಎಂದೇ ಹೆಸರಾಗಿರುವ ರಾಜ್ ಕೋಟ್ ಮೈದಾನದಲ್ಲಿ ರನ್ ಹೊಳೆ ಹರಿಯಬಹುದು ಎಂಬ ಲೆಕ್ಕಾಚಾರವಿದೆ, ಉತ್ತಮ ಫಾರ್ಮ್ ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ.
ಆರಂಭಿಕರು ಉತ್ತಮ ರನ್ ಕಲೆ ಹಾಕಿದರೆ ಶ್ರೆಯಸ್ ಅಯ್ಯರ್, ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಇನ್ನೂರು ರನ್ ಗಳ ಗುರಿ ನೀಡಬಲ್ಲರು, ಇನ್ನೂ ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ್ದ ಬೌಲರ್ ಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ.
ಇನ್ನು ಕಳೆದ ಪಂದ್ಯದಲ್ಲಿ ಸೋಲನಪ್ಪಿರುವ ಪ್ರವಾಸಿ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ, ನಾಯಕ ತೆಂಬು ಬುವುಮಾ, ಕಿಲ್ಲರ್ ಖ್ಯಾತಿಯ ಮಿಲ್ಲರ್, ಆಲ್ ರೌಂಡರ್ ಪ್ರಿಟೋರಿಯಸ್, ಕೀಪರ್ ಬ್ಯಾಟ್ಸ್‌ಮನ್ ಕ್ಲಾಸೆನ್ ಮತ್ತೊಮ್ಮೆ ಮಿಂಚುವ ವಿಶ್ವಾಸದಲ್ಲಿದ್ದಾರೆ, ಇವರಲ್ಲಿ ಒಬ್ಬರು ಮಿಂಚಿದರೂ ಸಹ ಸರಣಿ ಗೆಲ್ಲಬಹುದಾಗಿದೆ.