ಮೈಸೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿದ್ದಾರೆ ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಪೊಲೀಸರಿಂದ ತಪಾಸಣೆ ಕಾರ್ಯ ಆರಂಭವಾಗಿದೆ.
ಬಾಂಬ್ ಪತ್ತೆ ದಳದಿಂದ ತಪಾಸಣೆ ಕಾರ್ಯ ಮುಂದುವರಿದಿದ್ದು ವಿಐಪಿ ಸಂಚರಿಸುವ ಸ್ಥಳಗಳಲ್ಲಿ, ಮೈಸೂರು ನಗರ ಕೃತ್ಯ ತಡೆ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ, ಬಾಂಬ್ ಸ್ಕ್ವಾಡ್ ಇನ್ ಚಾರ್ಜ್ ಇನ್ ಸ್ಪೆಕ್ಟರ್ ಮೂರ್ತಿ ಅವರ ನೇತೃತ್ವದಲ್ಲಿ, ಪೊಲೀಸ್ ಆಯುಕ್ತ ಚಂದ್ರಗುಪ್ತರ ನಿರ್ದೇಶನದಂತೆ ಚಾಮುಂಡಿ ಬೆಟ್ಟದ ತಪಾಸಣೆ ಕಾರ್ಯ ನಡೆಯುತ್ತಿದೆ.
ವಿಐಪಿ ಸಂಚರಿಸುವ ಮಾರ್ಗಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಕಳೆದ ಒಂದು ವಾರದಿಂದಲೂ ಬಾಂಬ್ ಪತ್ತೆ ದಳ ವಿಐಪಿ ಭೇಟಿ ಸ್ಥಳ ಬಾಂಬ್ ಪತ್ತೆ ಉಪಕರಣಗಳು ಮತ್ತು ಶ್ವಾನ ತಪಾಸಣೆ ನಡೆಸುತ್ತಿದೆ.
ಜೂನ್ 20 ರಂದು ಮೋದಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ 21 ರಂದು ಯೋಗ ದಿನಾಚರಣೆಯಲ್ಲಿ ಮೈಸೂರಿನ ವಿಶ್ವ ವಿಖ್ಯಾತ ಅರಮನೆಯ ಮುಂಭಾಗದಲ್ಲಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.