ಶ್ರೀನಿಧಿ ಶೆಟ್ಟಿ ಸಿನಿಮಾಗೆ ಬರುವ ಮುನ್ನ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ ..?

ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿ ಶ್ರೀನಿಧಿ ಶೆಟ್ಟಿ ಮೋಡಿ ಮಾಡಿದ್ದು ಸುಳ್ಳಲ್ಲ, ಸಿನಿಮಾದಲ್ಲಿ ರಾಕಿ ಭಾಯ್ ಯಶ್ ಗೆ ನಾಯಕಿಯಾಗಿ, ಖಡಕ್ ಡೈಲಾಗ್ ಮೂಲಕ ಸಿನಿಮಾದ ಜೊತೆಗೆ ಅಭಿಮಾನಿಗಳ ಹೃದಯವನ್ನು  ಗೆದ್ದಿದ್ದಾರೆ, ಆ ಮೂಲಕ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ನಟಿ, ರೂಪದರ್ಶಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಹಲವಾರು ಬಾರಿ ಮಿಂಚಿರುವ ಇವರು 2016 ರಲ್ಲಿ ನಡೆದ  ಮಿಸ್ ದಿವಾ ಸೂಪರ್ ನ್ಯಾಷನಲ್ ಸ್ಪರ್ಧೆಯಲ್ಲಿ ಜಯಗಳಿಸಿ   ಕಿರೀಟವನ್ನು ಮುಡಿಗೇರಿಸಿಕೊಂಡರು ನಂತರ ಮಿಸ್ ಸೂಪರ್ ನ್ಯಾಷನಲ್ 2016 ರಲ್ಲಿ ಭಾರತವನ್ನು ಪ್ರತಿನಿಧಿಸಿ ಅವರು ಜಯಗಳಿಸಿದ್ದರು, ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಪ್ರತಿನಿಧಿಯಾಗಿದ್ದಾರೆ.

ಬೆಂಗಳೂರಿನ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು, ನಂತರ ಸೇಂಟ್ ಅಲೋಶಿಯಸ್ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಕೋರ್ಸ್ ಅನ್ನು ಪಡೆದರು, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು ಮತ್ತು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಮಾಡಿದ್ದಾರೆ.

2012 ರಲ್ಲಿ ನಡೆದ ಶ್ರೀನಿಧಿ ಕ್ಲೀನ್ ಮತ್ತು ಕ್ಲಿಯರ್ -ಪ್ರಾಯೋಜಿತ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು, ಅಲ್ಲಿ ಅವರು ಅಗ್ರ-ಐವರಲ್ಲಿ ಒಬ್ಬರಾಗಿದ್ದರು, ನಂತರ ಅವರು 2015 ರಲ್ಲಿ ನಡೆದ ಮಣಪ್ಪುರಂ ಮಿಸ್ ಸೌತ್ ಇಂಡಿಯಾದಲ್ಲಿ ಭಾಗವಹಿಸಿದ್ದರು ಮತ್ತು ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮಣಪ್ಪುರಂ ಮಿಸ್ ಕ್ವೀನ್ ಆಫ್ ಇಂಡಿಯಾದಲ್ಲಿ ಭಾಗವಹಿಸಿ  1 ನೇ ರನ್ನರ್ ಅಪ್ ಕಿರೀಟವನ್ನು ಪಡೆದರು ಮತ್ತು ಆಕ್ಸೆಂಚರ್‌ನಲ್ಲಿ ಉದ್ಯೋಗಿಯಾಗಿದ್ದಾಗ ಮಾಡೆಲ್ ಆಗಿಯೂ ಕೆಲಸ ಮಾಡಿದ್ದರು.

ನಟಿ ಶ್ರೀನಿಧಿ ಶೆಟ್ಟಿ ಅವರು ಚಲನಚಿತ್ರಗಳಲ್ಲಿ ನಟಿಸಲು ಅವಕಾಶವನ್ನು ಸ್ವೀಕರಿಸಲು ಪ್ರಾರಂಭಿಸಿದರು, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಆಕ್ಷನ್ ಚಿತ್ರ ಕೆಜಿಎಫ್ ಅಧ್ಯಾಯ 1  ರಲ್ಲಿ ಯಶ್ ಜೊತೆಗೆ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ನಟಿ ಚಾಪ್ಟರ್ 2 ರಲ್ಲಿಯೂ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading