ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್, ಅಭಿಮಾನಿಗಳ ಪ್ರೀತಿಯ ರಚ್ಚು ಎಂದೇ ಖ್ಯಾತಿ ಪಡೆದಿರುವ ರಚಿತಾ ರಾಮ್ ಅವರ ಮೊದರ ಹೆಸರು ಬಿಂಧಿಯಾ ರಾಮು, ಬೆಂಗಳೂರಿನ ಗವಿಪುರಂನ ನಿವೇದಿತಾ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದಿರುವ ಅವರು ನಟಿಯಾಗಿ ಉತ್ತಮ ಯಶಸ್ಸು ಗಳಿಸಿದ್ದಾರೆ.
ರಚಿತಾ ರಾಮ್ 2013 ರ ಬುಲ್‌ಬುಲ್ ಚಿತ್ರದ ಮೂಲಕ ದರ್ಶನ್‌ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಅವರು ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಜನಪ್ರಿಯ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೂ ಬರುವ ಮೊದಲು ಅವರು ಶಾಸ್ತ್ರೀಯ ಭರತ ನಾಟ್ಯಂ ನೃತ್ಯಗಾರ್ತಿಯಾಗಿದ್ದು, ಅವರು 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ವಿವಿಧ ವೇದಿಕೆಗಳಲ್ಲಿ ನೀಡಿದ್ದಾರೆ, ಆಕೆಯ ತಂದೆ ರಾಮ್, ಭರತ ನಾಟ್ಯ ನೃತ್ಯಗಾರರಾಗಿದ್ದು ಸುಮಾರು 500 ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ.
ಚಲನಚಿತ್ರಕ್ಕೆ ಪ್ರವೇಶಿಸುವ ಮೊದಲು, ಅವರು ಜನವರಿ 2007 ರಿಂದ ಸೆಪ್ಟೆಂಬರ್ 2009 ರವರೆಗೆ ಜೀ ಕನ್ನಡದಲ್ಲಿ ಪ್ರಸಾರವಾದ ಕನ್ನಡ ದಾರವಾಹಿ ಅರಸಿಯಲ್ಲಿ ಕಾಣಿಸಿಕೊಂಡಿದ್ದರು, ಸಿನಿಮಾ ರಂಗಕ್ಕೆ ಬಂದ ನಂತರ ಅವರಿಗೆ ಅವಕಾಶದ ಹೆಬ್ಬಾಗಿಲು ತೆರೆಯಿತು,ಮೂಲಗಳ ಪ್ರಕಾರ ಒಂದು ಸಿನಿಮಾಗೆ ಕನಿಷ್ಠ 60 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂದು ತಿಳಿದುಬಂದಿದೆ.
ನಂತರದ ದಿನಗಳಲ್ಲಿ ದಿಲ್ ರಂಗೀಲಾ (2014) ಮತ್ತು ಅಂಬರೀಶ್ (2014) ನಲ್ಲಿ ಕಾಣಿಸಿಕೊಂಡ ನಂತರ , ಅವರು ರನ್ನ , ಚಕ್ರವ್ಯೂಹ , ಪುಷ್ಪಕ ವಿಮಾನ , ಭರ್ಜರಿ , ಅಯೋಗ್ಯ , ಸೀತಾರಾಮ ಕಲ್ಯಾಣ , ನಟಸಾರ್ವಭೌಮ , ರುಸ್ತುಂ ಮತ್ತು ಆಯುಷ್ಮಾನ್ ಭವ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು, ತೆಲುಗು ಚಲನಚಿತ್ರ ಸೂಪರ್ ಮಾಚಿ (2022)ಯಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ಗೂ ಪ್ರವೇಶಿಸಿದ್ದಾರೆ.
2018 ರಲ್ಲಿ ಪ್ರೀತಂ ಗುಬ್ಬಿ ಅವರ ಜಾನಿ ಜಾನಿ ಯೆಸ್ ಪಾಪಾ ದುನಿಯಾ ವಿಜಯ್ ಅವರೊಂದಿಗೆ, ಮಹೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಸತೀಶ್ ನೀನಾಸಂ ಅವರ ಜೊತೆ ಮಾಡಿದ ಅಯೋಗ್ಯ ಚಿತ್ರ ವರ್ಷದ ಅತಿದೊಡ್ಡ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿತು.
ಬಹು ಬೇಡಿಕೆಯ ನಟರಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಕೈಯಲ್ಲಿ ಕ್ರಾಂತಿ ಸಿನಿಮಾ ಸೇರಿದಂತೆ ಪ್ರಸ್ತುತ 6 ಕ್ಕೂ ಹೆಚ್ಚು ಚಿತ್ರಗಳಿದ್ದು ಅವರಿಗೆ ಮತ್ತಷ್ಟು ಸಿನಿಮಾದಲ್ಲಿ ಅವಕಾಶ ಸಿಗಲಿ ಹಾಗೂ ಯಶಸ್ಸುಗಳಿಸಿ ಕನ್ನಡ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುಲಿ.