ದರ್ಶನ್ ಹೀರೋ ಆಗುವ ಮುಂಚೆ ಯಾವ – ಯಾವ ಸಿನಿಮಾದಲ್ಲಿ ನಟಿಸಿದ್ದರು ಗೊತ್ತೇ?

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಗ್ ಸ್ಟಾರ್, ಅಭಿಮಾನಿಗಳ ನೆಚ್ಚಿನ ಡಿ ಬಾಸ್ ದರ್ಶನ್ ಅವರು ಮಾಸ್ ಚಿತ್ರಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು ಅವರ ಹೊಸ ಚಿತ್ರಗಳು ಯಾವಾಗ ತೆರೆ ಮೇಲೆ ಬರಲಿದೆ ಎಂದು ಚಾತಕ ಪಕ್ಷಿಗಳಂತೆ ಅಭಿಮಾನಿಗಳು ಕಾಯುತ್ತಿರುತ್ತಾರೆ, ಬಾಕ್ಸ್ ಆಫೀಸ್ ಸುಲ್ತಾನನಾಗಿರುವ ದರ್ಶನ್ ಹೀರೋ ಆಗುವ ಮುಂಚೆ ಯಾವ – ಯಾವ ಸಿನಿಮಾದಲ್ಲಿ ನಟಿಸಿದ್ದರು ಗೊತ್ತೇ?.

ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳಿಗೆ 16 ಫೆಬ್ರವರಿ 1977 ರಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಜನಿಸಿದ ಅವರಿಗೆ ಹೇಮಂತ್ ಕುಮಾರ್ ಎಂದು ಹೆಸರಿಡಲಾಗಿತ್ತು, 1966 ರಲ್ಲಿ ತೆರಿಗೆ ಬಂದ ತೂಗುದೀಪ  ಚಲನಚಿತ್ರದಲ್ಲಿ  ಶ್ರೀನಿವಾಸ್ ನಟಿಸಿದ ಕಾರಣ ಅವರಿಗೆ ತೂಗುದೀಪ ಎಂಬ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತು.

ದರ್ಶನ್ ಅವರು 1995 ರಲ್ಲಿ ತಮ್ಮ ತಂದೆಯ ಮರಣದ ಮೊದಲು ಶಿವಮೊಗ್ಗದ ನೀನಾಸಂ ಎಂಬ ನಾಟಕ ತರಬೇತಿ ಸಂಸ್ಥೆಗೆ ಸೇರಿಕೊಂಡರು, ದರ್ಶನ್‌ಗೆ ಒಬ್ಬ ಸಹೋದರಿ ದಿವ್ಯಾ ಮತ್ತು ಕಿರಿಯ ಸಹೋದರ ದಿನಕರ್ ಚಲನಚಿತ್ರ ನಿರ್ಮಾಪಕರಾಗಿದ್ದು ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದು ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.

ನೀನಾಸಂನಿಂದ ಪದವಿ ಪಡೆದ ನಂತರ , ದರ್ಶನ್ ಅವರು ಹಿರಿಯ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಅವರ ಸಹಾಯಕ ಕ್ಯಾಮರಾಮನ್ ಆಗುವ ಮೊದಲು ಪ್ರೊಜೆಕ್ಷನಿಸ್ಟ್ ಆಗಿ ಕೆಲಸ ಮಾಡಿದ್ದರು . ಅವರ ಮೊದಲ ನಟನೆಯ ಪಾತ್ರವು ಎಸ್ . ನಾರಾಯಣ್ ಅವರ ದೂರದರ್ಶನ ಸೋಪ್ನಲ್ಲಿ ಬಂದಿತು,  ದರ್ಶನ್ ತರುವಾಯ ದೇವರ ಮಗ ( 2000 ) , ಎಲ್ಲರ ಮನೆ ದೋಸೆ ( 2000 ) , ಭೂತಯ್ಯನ ಮಕ್ಕಳು ( 2000 ) ಮತ್ತು ಮಿಸ್ಟರ್  ಹರಿಶ್ಚಂದ್ರ ( 2001 ) ಮುಂತಾದ ಚಿತ್ರಗಳಲ್ಲಿ ಹೆಚ್ಚಾಗಿ ಅತ್ಯಲ್ಪ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ ಪಿಎನ್ ಸತ್ಯ ನಿರ್ದೇಶಿಸಿದ ಮತ್ತು 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ  ಚಲನಚಿತ್ರಗಳಲ್ಲಿ ಪ್ರಮುಖ ಯಶಸ್ಸು ಸಿಕ್ಕಿತು ,ಇದರಲ್ಲಿ ಅವರು ದಾಸ ಎಂಬ ಮುಗ್ಧ ಯುವಕ ಅಂಡರ್‌ವರ್ಲ್ಡ್ ಡಾನ್ ಪಾತ್ರವನ್ನು ನಿರ್ವಹಿಸಿದ್ದರು.

ನಂತರ ರಮೇಶ್ ಯಾದವ್ ನಿರ್ಮಿಸಿದ ಕಿಟ್ಟಿ , ನಿನಗೋಸ್ಕರ , ನೀನಂದ್ರೆ ಇಷ್ಟ ಮತ್ತು ದಾಸ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು, ಪ್ರೇಮ್ ಅವರ ಚೊಚ್ಚಲ ನಿರ್ದೇಶನದ 2003 ರ ಸಾಹಸ ಚಿತ್ರ ಕರಿಯಾದಲ್ಲಿ ನಟಿಸಿ ಬೇಷ್ ಎನಿಸಿಕೊಂಡರು.

ಲಾಲಿ ಹಾಡು ಚಿತ್ರದಲ್ಲಿ ಉದಯೋನ್ಮುಖ ಸಂಗೀತಗಾರರಾಗಿ , ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಮತ್ತು ನಮ್ಮ ಪ್ರೀತಿಯ ರಾಮು ಚಿತ್ರದಲ್ಲಿ ಕುರುಡ ಬಡವರ ಪಾತ್ರವನ್ನು ನಿರ್ವಹಿಸಿದ ಅವರು 2004 ರಲ್ಲಿ  ಓಂ ಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಮತ್ತು ಪಿಎನ್ ಸತ್ಯ ಅವರ ದಾಸ ಚಿತ್ರದಲ್ಲಿ ನಟಿಸಿದರು .

50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಡಿ ಬಾಸ್ ಕೈಯಲ್ಲಿ ಇಂದಿಗೂ ಹಲವಾರು ಸಿನಿಮಾಗಳು ಅವರ ಕೈಯಲ್ಲಿವೆ. ಅವರ ಮುಂದಿನ ಸಿನಿಮಾವಾದ ಕ್ರಾಂತಿ ಅವರಿಗೆ ಮತ್ತಷ್ಟು ಯಶಸ್ಸು ತಂದುಕೊಡಲಿ ಎಂಬುದು ಅಭಿಮಾನಿಗಳ ಆಶಯ.

Discover more from Valmiki Mithra

Subscribe now to keep reading and get access to the full archive.

Continue reading