ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ದೈಹಿಕವಾಗಿ ದೂರವಾಗಿದ್ದರೂ ಸಹ ಅಭಿಮಾನಿಗಳ ಎದೆಯಲ್ಲಿ ಎಂದೂ ಬಾಡದ ಬೆಟ್ಟದ ಹೂವಿನಂತಿದ್ದಾರೆ. ತನ್ನ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣದ ಪುನೀತ್ ಅಭಿಮಾನಿ ರವಿಕುಮಾರ್ ತನ್ನ ನೆಚ್ಚಿನ ನಟನಿಗಾಗಿ 2100 ಕಿಲೋ ಮೀಟರ್ ಕಾಲ್ನಡಿಗೆ ನಡೆದಿದ್ದಾರೆ.
55 ವರ್ಷದ ನಿವೃತ್ತ ಸಿಆರ್ ಪಿ ಎಫ್ ಇನ್ಸ್ ಪೆಕ್ಟರ್ ರವಿಕುಮಾರ್ 100 ದಿನಗಳಲ್ಲಿ 3200 ಕಿಲೋಮೀಟರ್ ನಡೆಯುವ ಗುರಿ ಹೊಂದಿರುವ ರವಿಕುಮಾರ್ ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ 2100 ಕಿಲೋಮೀಟರ್ ಮುಕ್ತಾಯಗೊಳಿಸಲಾಗಿದೆ.
98 ದಿನಗಳ ಹಿಂದೆ ಶುರು ಮಾಡಿರುವ ಕಾಲ್ನಡಿಗೆ 120 ದಿನದೊಳಗಾಗಿ 3200 ಕಿಲೋಮೀಟರ್ ಪೂರ್ಣಗೊಳಿಸುವ ಗುರಿ ಹೊಂದಿದ್ದ ಪುನೀತ್ ಗೆ ಭಾರತ ರತ್ನ ನೀಡಬೇಕೆಂದು ಕಾಲ್ನಡಿಗೆ ಆರಂಭಿಸಿರುವ ರವಿಕುಮಾರ್ ಕನ್ನಡಿಗನಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ತೆಲಂಗಾಣದ ಅಭಿಮಾನಿ 2100 ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿದ್ದಾರೆ.