ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ಚಾರ್ಲಿ 777 ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಈ ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ಶುಕ್ರವಾರ, ಶನಿವಾರ, ಭಾನುವಾರ ಚಿತ್ರದ ಬಹುತೇಕ ಪ್ರದರ್ಶನಗಳು ಹೌಸ್ ಫುಲ್ ಆಗಿದ್ದವು, ಸೋಮವಾರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಸಿನಿಮಾ ವೀಕ್ಷಿಸಿದ್ದು ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇದೇ ಸಂದರ್ಭದಲ್ಲಿ ನಿರ್ದೇಶಕ ಕಿರಣ್ ರಾಜ್ ಅವರು ಐದು ವರ್ಷಗಳ ನಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರಕ್ಕೆ 25 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಆದರೆ ಬಿಡುಗಡೆಯಾದ ಕೇವಲ 4 ದಿನದಲ್ಲಿ 27 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದ್ದು ಚಿತ್ರತಂಡ ಯಶಸ್ಸಿನ ಅಳತೆಯಲ್ಲಿ ತೇಲುತ್ತಿದೆ.
ಸೋಮವಾರ ಕೂಡ ಜನರು ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ನೋಡುತ್ತಿದ್ದರು. ಇದು ಖುಶಿ ತಂದಿದ್ದು. ವಾರಾಂತ್ಯದ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆಲುಗು ವಿತರಕರು ಸಂತೋಷಪಟ್ಟಿದ್ದಾರೆ. ಈ ವಾರ ಕೂಡ ಉತ್ತಮ ಪ್ರದರ್ಶನಗೊಳ್ಳುವ ನಿರೀಕ್ಷೆಗಳಿವೆ.
ದೇವರ ನಾಡು ಕೇರಳದಲ್ಲಿ ಮೂರು ಮಲಯಾಳಂ ಚಿತ್ರ ಕೂಡ ಚಾರ್ಲಿ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದೆ. ಆದರೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ಬೇರೆ ರಾಜ್ಯಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಚಿತ್ರರಂಗದಲ್ಲಿ ಎಲ್ಲೆಡೆ ಚಾರ್ಲಿಯದೇ ಮಾತು, ಸಿನಿಮಾ ವೀಕ್ಷಿಸಿದವರೆಲ್ಲರೂ ಚಾರ್ಲಿ 777 ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆಯೇ ಎಂದು ಕಾದು ನೋಡಬೇಕಾಗಿದೆ.