ವನ್ಯಜೀವಿ ಪ್ರಿಯರ ಪ್ರೀತಿಯ ಆನೆಯಾಗಿದ್ದ ಮಿಸ್ಟರ್ ಕಬಿನಿ ವಿಶೇಷತೆ ನಿಮಗೆ ಗೊತ್ತೇ?

ಪರಿಸರವು ಹಲವಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು, ಮರ ಗಿಡಗಳನ್ನು ಹೇರಳವಾದ ಜಲರಾಶಿಯನ್ನು ಹೊಂದಿರುವ ವಿಸ್ಮಯ ತಾಣವಾಗಿ ಮಾನವರಿಗೆ ಅಗತ್ಯವಾದ ಸಂಪನ್ಮೂಲಗಳನ್ನು ನೀಡುತ್ತಾ ಸಕಲ ಪ್ರಾಣಿ ಸಂಕುಲಕ್ಕೆ ಆಹಾರದ ಮೂಲವಾಗಿ ಎಲ್ಲರನ್ನೂ ಪೊರೆಯುತ್ತಿದೆ.

ನಮ್ಮ ರಾಜ್ಯದಲ್ಲಿ ಪರಿಸರ ಸಂಪನ್ಮೂಲಕ್ಕೆ ಕೊರತೆಯಿಲ್ಲ, ಹುಲಿ, ಸಿಂಹ, ಚಿರತೆ, ಆನೆ, ಜಿರಾಫೆ ಹೀಗೆ ಸಾವಿರಾರು ಬಗೆ ಬಗೆಯ ಪ್ರಾಣಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಆದರೆ ಕೆಲವೊಮ್ಮೆ ಮಾನವನ ಹಸ್ತಕ್ಷೇಪದಿಂದಾಗಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು ನಾಡಿನೊಳಗೆ ಪ್ರವೇಶಿಸುವ ಉದಾಹರಣೆಗಳಿವೆ.

ನಮ್ಮೆದುರಿಗಿರುವ ದೈತ್ಯ ಪ್ರಾಣಿಗಳಲ್ಲಿ ಆನೆಗೆ ಮೊದಲ ಸ್ಥಾನ, ರಾಜ್ಯದಲ್ಲಿ ಅನೇಕ ಆನೆ ಕಾರಿಡಾರ್ ಗಳು ಹಾಗೂ ಸಾಕಾನೆ ಶಿಬಿರಗಳು ಇವೆ, ಆನೆಗಳ ಕೋರೆ ಹಲ್ಲು ಅಥವಾ ದಂತಗಳು ಬಹು ಬೆಲೆಬಾಳುವಂತದ್ದು, ಆದ ಕಾರಣದಿಂದಲೇ ಆನೆ ದಂತ ಕಳ್ಳತನ ಮಾಡಲು ಸಾವಿರಾರು ಆನೆಗಳನ್ನು ಸಹ ಕೊಂದಿರುವುದು ದುರಂಥವೇ ಸರಿ.

ನಾಗರಹೊಳೆ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಕಾಣಿಸುತ್ತಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ಹಾಗೂ ಭೋಗೇಶ್ವರ ಎಂದು ಕರೆಯಲಾಗುತ್ತಿದ್ದ ಗಂಡಾನೆ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದೆ, ಏಷ್ಯಾ ತಳಿಯ ಆನೆಗಳಲ್ಲೇ 8 ಅಡಿ ಉದ್ದದ ದಂತಗಳನ್ನು ಹೊಂದಿದ್ದು ನಡೆದು ಬರುತ್ತಿದ್ದರೆ ಅದರ ದಂತಗಳು ನೆಲಕ್ಕೆ ತಾಗುತ್ತಿತ್ತು.

ವನ್ಯಜೀವಿ ಪ್ರಿಯರ ಪ್ರೀತಿಯ ಆನೆಯಾಗಿದ್ದ ಇದು ಅತ್ಯಂತ ಸೌಮ್ಯ ಸ್ವಭಾವದ ಆನೆಯಾಗಿದ್ದು ಅರಣ್ಯ ವಲಯದ ಭೋಗೇಶ್ವರ ದೇವಾಲಯದ ಬಳಿ ಹೆಚ್ಚಿನ ಸಮಯ ಕಳೆಯುತ್ತಿದ್ದರಿಂದ ಇದಕ್ಕೆ ಭೋಗೇಶ್ವರ ಎಂದು ಹೆಸರು ಬಂದಿತ್ತು. ಮಿಸ್ಟರ್ ಕಬಿನಿ ಆನೆ ನಿಧನ ಹೊಂದಿದ ಸುದ್ದಿ ಕೇಳಿ ಪ್ರಾಣಿ ಪ್ರಿಯ ಚಾಲೆಂಜಿಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading