ಚಳ್ಳಕೆರೆ : ನಿರ್ದಿಷ್ಟ ಕಾರ್ಯಸೂಚಿಗಳೊಂದಿಗೆ ಕೆಲಸ ನಿರ್ವಹಿಸಿದರೆ ಮಾತ್ರ ಸರ್ಕಾರದ ಗುರಿಗಳಿಗೆ ಅನುಗುಣವಾಗಿ ದೀನದಲಿತರು ಮತ್ತು ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್ . ರಘುಮೂರ್ತಿ ಹೇಳಿದರು.
ಮಂಗಳವಾರ (ಜೂ. 14)ದಂದು ನಡೆದ ಸೋಮಗುದ್ದು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅವರು ಮಾತನಾಡಿದರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸುವಾಗ ವಿಶೇಷ ವಾಗಿ ಮಹಿಳೆಯರಿಗೆ ಮತ್ತು ದುರ್ಬಲ ವರ್ಗದವರಿಗೆ ರಾಜಕೀಯದಲ್ಲಿ ವಿಶೇಷ ಸ್ಥಾನಮಾನವನ್ನು ನೀಡುವ ಬಯಕೆಯಿಂದ ಆದ್ಯತೆ ನೀಡುವುದರ ಮುಖಾಂತರ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಆಯ್ಕೆಯಾಗುವಂತಹ ಮಹಿಳಾ ಪ್ರತಿನಿಧಿಗಳಿಗೆ ಸಂವಿಧಾನದ ಆಶಯದಂತೆ ಸರ್ಕಾರದಿಂದ ಕೊಡುವಂತಹ ಎಲ್ಲಾ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಹೊಣೆಗಾರಿಕೆ ಇದ್ದು ಜನರಿಗೆ ನ್ಯಾಯ ಒದಗಿಸುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳನ್ನು ಮಾಡಲಾಗಿದೆ .
ಯಾವುದೇ ಆಶಾ ಮತ್ತು ವೈಯಕ್ತಿಕ ಪ್ರಭಾವದ ಆಸೆಗಳಿಗೆ ಬಡವರ ಕೆಲಸ ಮಾಡುವುದರಿಂದ ಸರ್ಕಾರದ ಮತ್ತು ಸಮಾಜದ ಸಾಲ ತೀರಿಸುವ ಕೆಲಸ ಮಾಡಿದಂತಾಗುತ್ತದೆ ಆದ್ದರಿಂದ ಸರ್ಕಾರಿ ಸ್ವಾಮ್ಯದ ಗೋಮಾಳ, ಹಳ್ಳ, ದಾರಿ, ಸ್ಮಶಾನ, ಹಾಗೂ ಶಾಲಾ ಸ್ಥಳಗಳನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಮಾತ್ರ ನಿಮ್ಮದೇ ಆಗಿರುತ್ತದೆ.
ಅಧ್ಯಕ್ಷರಾಗಿ ಪಾರ್ವತಮ್ಮ ಮತ್ತು ಉಪಾಧ್ಯಕ್ಷರಾಗಿ ಶೃತಿ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರನ್ನೂ ಸಹ ಅವಿರೋಧವಾಗಿ ಆಯ್ಕೆ ಮಾಡಿ ಅಭಿನಂದಿಸಲಾಯಿತು.