ದೇಶದಲ್ಲಿ ಸಂಭವಿಸುವ ಅವಘಡಗಳ ಕುರಿತು ಭವಿಷ್ಯ ನುಡಿದು ಮುನ್ಸೂಚನೆ ನೀಡುವ ಹಾಸನ ಜಿಲ್ಲೆಯ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮಳೆ – ಬೆಳೆ ವಿಚಾರ ಕಂಡ ಮಂಡಲ ಆಗುತ್ತೆ ಎಂದು ತಿಳಿಸಿದ್ದೆ, ಗುಡುಗು ಸಿಡಿಲು ಮಿಂಚು ಬರುತ್ತೆ ಪ್ರಕೃತಿ ಮೇಲೆ ಹಾವಳಿ ಮಾಡುತ್ತೆ ಮಲೆನಾಡು ಬಯಲು ಆಗುತ್ತದೆ . ಬಯಲು ಮಲೆನಾಡು ಆಗುತ್ತದೆ ಎಂದು ತಿಳಿಸಿದ್ದೆ, ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿಯಾಗುತ್ತದೆ, ಅವೆಲ್ಲವೂ ಜರುಗುತ್ತಿವೆ . ಮುಂಗಾರು ಇನ್ನೂ ಹೆಚ್ಚಳವಾಗುತ್ತದೆ, ಹಿಂಗಾರಿನಲ್ಲಿ ಅಕಾಲಿಕ ಮಳೆ ಆಗುವ ಸಂಭವವಿದೆ ಎಂದರು.
ರಾಜಕೀಯದ ಬಗ್ಗೆ ಅಸ್ಥಿರತೆ ಎಂದು ತಿಳಿಸಿದ್ದೆನು . ಗುಂಪುಗಳು ಆಗುತ್ತದೆ ಎಂದು ತಿಳಿಸಿದ್ದೆ, ಅದನ್ನ ನೀವೇ ಕಂಡುಕೊಂಡಿದ್ದೀರಾ ನಾನು ಯುಗಾದಿ ವೇಳೆ ಇದನ್ನೆಲ್ಲಾ ಹೇಳಿದ್ದೆ ಎಂದ ಅವರು ದೇಶದಲ್ಲಿ ಅವಘಡ ಆಗುತ್ತದೆ ಎಂದು ಹೇಳಿದ್ದೆ ಅದು ಈಗ ಆರಂಭವಾಗಿದೆ ಎಂದರು.
ಮತ್ತೊಮ್ಮೆ ಕೊವಿಡ್ ಬರುತ್ತದೆ ಎಂದು ಹೇಳಿದ್ದೆ, ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತದೆ. ಕೊವಿಡ್ ಸೇರಿದಂತೆ ಮನುಷ್ಯ ಕಷ್ಟ ಬಂದಾಗ ದೇವರ ಅಂತಾನೆ, ಧರ್ಮ ಅಂತಾನೆ, ದೈವ ಪ್ರಾರ್ಥ ಮಾಡುತ್ತಾನೆ ಎಂದ ಅವರು ಇನ್ನೂ ಒಂದೂವರೆ ವರ್ಷದ ನಂತರ ಬಿಡುಗಡೆ ಆಗುತ್ತದೆ, ಹೋಗುವಾಗ ವಿಪರೀತ ಕಷ್ಟ ಕೊಟ್ಟು ಹೋಗುತ್ತದೆ, ಈಗಿನಿಂದಲೇ ಎಚ್ಚರ ವಹಿಸಬೇಕು . ನಾನು ಮೊದಲೇ ಹೇಳಿದ್ದೆ, ಮದ್ದಿಲ್ಲದ ಕಾಯಿಲೆ ಬರುತ್ತದೆ, ಜನರು ನಡುಗಿ ಹೋಗುತ್ತಾರೆ ಎಂದು ತಿಳಿಸಿದ್ದೆ ಎಂದರು.