ರಾಜ್ಯಸಭೆ ಚುನಾವಣೆ ಫಲಿತಾಂಶ ಬಂದರೂ ಸಹ ಜೆಡಿಎಸ್ ನಲ್ಲಿ ಶಾಸಕ ಗುಬ್ಬಿ ಶ್ರೀನಿವಾಸ್ ಹಾಗೂ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಡುವಿನ ವಾರ್ ತಾರಕಕ್ಕೇರಿದ್ದು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಉಭಯ ನಾಯಕರ ಅಭಿಮಾನಿಗಳ ನಡವೆ ಪೈಪೋಟಿ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಗುಬ್ಬಿ ಶಾಸಕ ಶ್ರಿನಿವಾಸ್ ಬೆಂಬಲಿಗರು ಮತ್ತೊಂದು ವಿನೂತನ ಫೋಟೋ ವೈರಲ್ ಮಾಡುತ್ತಿದ್ದು ನಿನ್ನೆಯಷ್ಟೆ ತಿಥಿಕಾರ್ಡ ವೈರಲ್ ಆದ ಬೆನ್ನಲ್ಲೆ ಮತ್ತೊಂದು ಪೋಟೋ ವೈರಲ್ ಆಗಿದ್ದು ಯು.ಟರ್ನ್ ಕುಮಾರ ಕಾಣೆಯಾಗಿದ್ದಾರೆ, ಮಿಸಿಂಗ್ ಎಂದು ಎಚ್ ಡಿಕೆ ಪೋಟೊ ಹಾಕಿ ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಎಸ್.ಆರ್.ಶ್ರಿನಿವಾಸ್ ಗುಬ್ಬಿ ಎಂಎಲ್ಎ ಕ್ಯಾನ್ಸ್ ಕ್ಲಬ್ ಪೇಸ್ ಬುಕ್ ಪೇಜ್ ನಲ್ಲಿ ದಿನಕೊಂದು ಪೋಸ್ಟ್ ಗಳನ್ನು ಹಾಕುವುದರ ಮೂಲಕ ಮಾಜಿ.ಸಿ.ಎಂ. ಎಚ್ ಡಿಕೆ ವಿರುದ್ದ ಶಾಸಕ ಶ್ರಿನಿವಾಸ್ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜೆಡಿಎಸ್ ಗ್ರೂಪ್ ಹಾಗೂ ವಾಸು ಅಭಿಮಾನಿಗಳ ಬಳಗ ಎಂಬ ವಾಟ್ಸಾಪ್ ಗ್ರೂಪ್ ಗಳಲ್ಲಿ ಪೋಟೋ ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.