ಸ್ಯಾಂಡಲ್‌ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಳಿಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಆ ಚಿತ್ರಗಳು ರಿಲೀಸ್‌ಗೂ ರೆಡಿಯಿದೆ, ಈ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕನ್ನಡದಲ್ಲೂ ʻಆರ್‌ಆರ್‌ಆರ್ʼ ಸಿನಿಮಾ ಬರಲಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ನಟನೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿ ಹಾಗೂ ಚಾರ್ಲಿ 777 ಸಿನಿಮಾದ ಯಶಸ್ಸಿನಲ್ಲಿರುವ ನಟ ರಕ್ಷಿತ್ ಶೆಟ್ಟಿ ಈಗ ತಮ್ಮ ಹೊಸ ಚಿತ್ರದ ಬಗ್ಗೆ ತಿಳಿಸಿದ್ದು ಕನ್ನಡದಲ್ಲೂ ಆರ್‌ಆರ್‌ಆರ್ ಸಿನಿಮಾ ತೆರೆಗೆ ಬರಲಿದೆ, ತೆಲುಗಿನ `ಆರ್‌ಆರ್‌ಆರ್’ಗೆ ಸೆಡ್ಡು ಹೊಡೆಯಲು ಕನ್ನಡದಲ್ಲೂ `ಆರ್‌ಆರ್‌ಆರ್’ ಚಿತ್ರ ತೆರೆಗೆ ಬರಲಿದ್ದು ಇದರಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ `ಆರ್‌ಆರ್‌ಆರ್’ ಚಿತ್ರ ಕನ್ನಡದಲ್ಲೂ ಬರಲಿದೆ. ಕನ್ನಡದ `ಆರ್‌ಆರ್‌ಆರ್’ ಎಂದರೆ ರಕ್ಷಿತ್, ರಿಷಬ್, ರಾಜ್ ಒಟ್ಟಿಗೆ ನಟಿಸುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತ್, ನನ್ನ ಬಳಿ ಈಗಾಗಲೇ ಚಿತ್ರಕಥೆ ತಯಾರಿದ್ದು ಅದನ್ನು ಸಿನಿಮಾ ಮಾಡುವ ಆಲೋಚನೆಯಿದೆ ಎಂದು ಹೇಳಿದ್ದಾರೆ.