ಬೆಂಗಳೂರು : ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಖ್ಯಾತಿಗಳಿಸಿರುವ ಬೆಂಗಳೂರಿನಲ್ಲಿ ಇದೀಗ ಬೇರೆ ಬೇರೆ ಕಾರಣಗಳಿಂದ ತನ್ನ ಖ್ಯಾತಿಯನ್ನು ಕಳೆದು ಕೊಳ್ಳುವ ಭೀತಿ ಎದುರಾಗಿದೆ.
ಅಯ್ಯೋ ನಮ್ಮ ಬೆಂಗಳೂರಿಗೆ ಏನ್ ಆಯ್ತು ಎಂದು ಪ್ರಶ್ನೆ ಮಾಡಿದೆ, ರಸ್ತೆಗಳ ಕುರಿತು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ, ಈಗ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟರು ಸೇರಿದಂತೆ ಪ್ರಮುಖರು ಸಿಕ್ಕಿ ಬಿದ್ದಿದ್ದು ಮತ್ತೊಮ್ಮೆ ಸುದ್ದಿಯಾಗಿದೆ.
ದಿ ಪಾರ್ಕ್ ಹೋಟೆಲ್ ಪಾರ್ಟಿ ಪ್ರಕರಣದಲ್ಲಿ ಅಖಿಲ್ ಸೋನಿ, ಅರ್ಜೋತ್ ಸಿಂಗ್, ಹನಿ, ದರ್ಶನ್ ಸುರೇಶ್ ಹಾಗೂ ಸಿದ್ದಾಂತ್ ಕಪೂರ್ ಬಂಧನವಾಗಿದ್ದು ಅರ್ಜೋತ್ ಸಿಂಗ್ ಮೂಲತಹ, ಪಂಜಾಬ್ ಮೂಲದವರು ಎನ್ನಲಾದ ಪಾರ್ಟಿ ಮಾಡಲೆಂದು ನಗರಕ್ಕೆ ಬಂದಿದ್ದರು.
ಒಟ್ಟು ಆರು ಮಂದಿಯನ್ನು ಬಂಧಿಸಿ ಡ್ರಗ್ಸ್ ಸೇವನೆ ಮಾಡಿರುವ ಆರೋಪಿಗಳ ವಿಚಾರಣೆ ವೇಳೆ ಹಲಸೂರು ಪೊಲೀಸ್ ಠಾಣೆಗೆ ಡಿಸಿಪಿ ಭೀಮಾಶಂಕರ್ ಗುಳೇದ್
ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟರ ಹಾಟ್ ಸ್ಪಾಟ್ ಆಗ್ತಿದ್ದೀಯಾ ಬೆಂಗಳೂರು ಎಂಬ ಅನುಮಾನ ಮೂಡುತ್ತಿದೆ, ಈ ಹಿಂದೆ ಸಿಸಿಬಿ ಅಧಿಕಾರಿಗಳು, ರೇವ್ ಪಾರ್ಟಿ ಮಾಡಿದ್ದ ನಟ – ನಟಿಯರನ್ನ ವಿಚಾರಣೆ ನಡೆಸಿದ್ದು ಕೆಲವರು ಜಾಮೀನಿನ ಮೇಲೆ ಹೊರಗಡೆ ಇರುವುದನ್ನು ಗಮನಿಸಬಹುದಾಗಿದೆ.