ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಸಂವಿಧಾನ ಬದ್ಧ ಹಕ್ಕಾದ ಮೀಸಲಾತಿ ಹೋರಾಟದಲ್ಲಿ ಶ್ರೀ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ರವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಭಾಗಿಯಾಗಿ ಪ್ರತಿಭಟನೆಗೆ ಹುರುಪು ತುಂಬಿದರು . ಹಿಂದುಳಿದ ಸಮುದಾಯಗಳ ಹಲವಾರು ಮುಖಂಡರು ಸಾರ್ವಜನಿಕರು ಎಸ್ಸಿ ಎಸ್ಟಿ ಸಂಘ ಸಂಸ್ಥೆಗಳು ಹೋರಾಟದಲ್ಲಿ ಭಾಗವಹಿಸಿ ಮೀಸಲಾತಿ ಹೋರಾಟಕ್ಕೆ ಬಲ ತುಂಬಿದರು.