*ಬಸವನ ಬಾಗೇವಾಡಿ*
ವಿಜಯಪುರ ಜಿಲ್ಲೆ ಬಸವನ ಬಾಗೇಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾಂದಪುರಿ ಸ್ವಾಮೀಜಿ ಅವರು ಪರಿಶಿಷ್ಟ ಜಾತಿಗೆ 15% ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ರಾಜ್ಯಾಧ್ಯಾಂತ ಕರೆನೀಡಿದ ಹೋರಾಟ ಬೆಂಬಲಿಸಿ ಬಸವನ ಬಾಗೇವಾಡಿ ಯಲ್ಲಿ ಅಖೀಲ ಕರ್ನಾಟಕ ವಾಲ್ಮೀಕಿ ಮಾಹಾಸಭಾ ತಾಲೂಕಾ ಘಟಕದ ವತಿಯಿಂದ ಪ್ರತಿಭಟನೆಮಾಡಿ ತಶಿಲ್ದಾರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಹಾಸಭಾದ ಜಿಲ್ಲಾ ಉಪಾಧ್ಯಕ್ಷ ಸಿದ್ದು ಮೇಟಿ ಮಾತನಾಡಿ ಬಿಜೆಪಿ ಸರಕಾರ ಬಂದ 24ಗಂಟೆಯಲ್ಲಿ ವಾಲ್ಮೀಕಿ ಎಮಾಜಕ್ಕೆ 7.5% ಮೀಸಲಾತಿ ನೀಡುತ್ತೆವೆ ಎಂದು ಭರವಸೆ ನೀಡಿತ್ತು.ಮತ್ತು ಸಚಿವ ಶ್ರೀರಾಮುಲು ಅವರು ಸರಕಾರ ಬಂದತಕ್ಷಣ ಸಮೂದಾಯಕ್ಕೆ ಮೀಸಲಾತಿ ನೀಡುತ್ತೆವೆ ಅದನ್ನು ರಕ್ತದಲ್ಲಿ ಬರೆದು ಕೊಡುತ್ತೆನೆ ಎಂದಿದ್ದರು. ಎಲ್ಲಿ ಹೋಯಿತು ನಿಮ್ಮಮಾತು ಎಂದರು.
ಆದಷ್ಟು ಬೇಗನೆ ಮೀಸಲಾತಿ ನೀಡದಿದ್ದರೆ ರಾಜ್ಯಾಧ್ಯಾಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ P Y ಕೋಳೂರ,ಬಸನಗೌಡ ಪಾಟೀಲ,ರಾಜು ಕುರಿ,ದುಂಡಪ್ಪ ಮದಕರಿ ಸಮಾಜದ ಮುಖಂಡರು ಭಾಗವಹಿಸಿದ್ದರು.