ಬೆಳಗಾವಿ ಜಿಲ್ಲಾದ್ಯಂತ ಪ್ರತಿಯೊಂದು ತಾಲೂಕಿನಲ್ಲಿ ಎಸ್ ಟಿ ಸಮುದಾಯದ ಅನೇಕ ಸಂಘಟನೆಗಳು ಹಾಗೂ ಎಸ್ಟಿ ಸಮುದಾಯದ ಮುಖಂಡರು ಸೇರಿ ಶ್ರೀ ಪರಮಪೂಜ್ಯ ಪ್ರಸನ್ನಂದ ಸ್ವಾಮೀಜಿಯವರ ಆದೇಶದ ಮೇರೆಗೆ ನಿವೃತ್ತ ನ್ಯಾಯಮೂರ್ತಿ ಗಳಾದ ನಾಗಮೋಹನ್ ದಾಸ್ ರವರ ವರದಿಯನ್ನು ಅನುಷ್ಠಾನಗೊಳಿಸುವ ಸಲುವಾಗಿ ನಮ್ಮ ವಾಲ್ಮೀಕಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ನಿರುದ್ಯೋಗವನ್ನು ಹೋಗಲಾಡಿಸಲು ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕು ಅಂದರೆ ಹುಕ್ಕೇರಿ, ಚಿಕ್ಕೋಡಿ,ಸೌದತ್ತಿ, ಯರಗಟ್ಟಿ, ಮುಂತಾದ ತಾಲೂಕುಗಳ ತಹಶೀಲ್ದಾರರ ಮುಕಾಂತರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಎಸ್ಸಿ 17% ಹಾಗೂ ಎಸ್ಟಿ7.5% ಮೀಸಲಾತಿ ಹೆಚ್ಚಳ ಸಲುವಾಗಿ ಪ್ರತಿಭಟನೆ ಮಾಡಿ ಮನವಿಯನ್ನು ಸಲ್ಲಿಸಲಾಯಿತು