ತುಮಕೂರು: ಬಿರುಗಾಳಿ ಸಹಿತ ನಿರಂತರ ಸುರಿದ ಮಳೆಗೆ ಗುಮ್ಮನಘಟ್ಟ ಗ್ರಾಮದ ಮುರುಳಿ, ಶಂಕರ ಹಾಗೂ ಶ್ರೀನಿವಾಸ ಎನ್ನುವವರ ಮನೆಗೆ ಸಂಪೂರ್ಣ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಪಾವಗಡ ತಾಲೂಕಿನ ಗುಮ್ಮನಘಟ್ಟ ಗ್ರಾಮದ ಮೂರು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಘಟನೆಯಲ್ಲಿ ಡಿಸೈನ್ ಕಾರ್ಡ್, ವಾರ್ಪು, ಪಾಗಡಿಗಳು, ರೇಷ್ಮೆ, ಕೋನ್ಗಳು ಸಂಪೂರ್ಣ ಪುಡಿ ಪುಡಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.