ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡ ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೃದಯಾಘಾತದಿಂದ ಮೃತರಾಗಿದ್ದಾರೆ.
ಮೃತರನ್ನು ಶ್ರೀ ಜ್ಞಾನಕ್ಷಿ ವಿದ್ಯಾ ಮಂದಿರದ ಮಾಲಕ ಹಾಗೂ ಬೆಂಗಳೂರು ಉತ್ತರ ವಲಯದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ನರೇಂದ್ರ ಕುಮಾರ್ (45) ಎಂದು ಗುರುತಿಸಲಾಗಿದೆ.
ಇವರು ಪುತ್ತೂರು ವಿವೇಕಾನಂದ ಕಾಲೇಜಿಗೆ ತಮ್ಮ ಶಾಲೆಯ ಶಿಕ್ಷಕಿಯರನ್ನು ತರಬೇತಿಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿತರೊಂದಿಗೆ ಬಂದಿದ್ದರು, ಬಳಿಕ ತಮ್ಮ ಪತ್ನಿ ಮಕ್ಕಳು ಸೇರಿ ಧರ್ಮಸ್ಥಳ ಸನ್ನಿಧಿ ಗೆಸ್ಟ್ ನಲ್ಲಿ ರೂಂ ಮಾಡಿದ್ದರು, ಇಂದು ಬೆಳಗ್ಗೆ ಏಕಾಏಕಿ ಡಾ. ನರೇಂದ್ರ ಕುಮಾರ್ ಗೆ ಎದೆನೋವು ಕಾಣಿಸಿದ್ದು, ಕೂಡಲೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದು, ನೇತ್ರಾವತಿ ಸಮೀಪ ವಾಹನದಲ್ಲೇ ಹೃದಯಾಘಾತದಿಂದ ನಿಧನರಾದ ಎಂದು ತಿಳಿದುಬಂದಿದೆ.