ಮೈಸೂರು: ಪಾಲಿಕೆಯ ಎಂಜಿನಿಯರ್ ಗುರುಸಿದ್ಧಯ್ಯ ಹೊಸ ಕಟ್ಟಡ ನಿರ್ಮಿಸುವ ಸಂಬಂಧ ಯೋಜನೆ ಮಂಜೂರಾತಿಗಾಗಿ ಮಹಿಳೆಯೊಬ್ಬರಿಂದ ₹ 3 ಸಾವಿರ ಲಂಚ ಪಡೆಯುವಾಗ ಪೊಲೀಸರು ಬಂಧಿಸಿದ್ದಾರೆ.
ಯೋಜನೆ ಮಂಜೂರಾತಿ ಕುರಿತು ವಿಚಾರಿಸಿದಾಗ ಗುರುಸಿದ್ಧಯ್ಯ ₹ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹ 3 ಸಾವಿರವನ್ನು ಮುಂಗಡ ಪಡೆದಿದ್ದರು. ಉಳಿದ ₹ 3 ಸಾವಿರ ಲಂಚದ ಹಣವನ್ನು ಗುರುಸಿದ್ಧಯ್ಯ ತಮ್ಮ ಕಚೇರಿಯಲ್ಲಿ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.