ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ದಿವಂಗತ ಎಂ.ಪಿ.ಶಂಕರ್ ಅವರ ಪತ್ನಿ ಮಂಜುಳ ಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನೂರಾರು ಸಿನಿಮಾಗಳಲ್ಲಿ ನಟಿಸಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಎಂ.ಪಿ.ಶಂಕರ್ ಅವರು 2008ರಲ್ಲಿ ನಿಧನರಾಗಿದ್ದರು. ಪತಿ ನಿಧನದ ಬಳಿಕ ಮೈಸೂರಿನ ವಿಜಯನಗರದ ತಮ್ಮ ನಿವಾಸದಲ್ಲಿ ವಾಸವಿದ್ದ ಮಂಜುಳ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
75 ವರ್ಷದ ವರ್ಷದ ಮಂಜುಳಾ ಶಂಕರ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಮಂಜುಳಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ವಿದ್ಯಾರಣ್ಯಪುರ ಬಡಾವಣೆಯ ವೀರಶೈವ ರುದ್ರಭೂಮಿಯಲ್ಲಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಖ್ಯಾತ ನಟ ಎಂಪಿ ಶಂಕರ್ ಬಗ್ಗೆ ಹೇಳುವುದಾದರೆ ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರು. ಕನ್ನಡದ ಅನೇಕ ಪಾತ್ರಗಳಲ್ಲಿ ಎಂ ಪಿ ಶಂಕರ್ ನಟಿಸಿದ್ದಾರೆ. ಅತ್ಯುತ್ತಮ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಎಂ ಪಿ ಶಂಕರ್ ಕನ್ನಡ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಅವರ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಸತ್ಯ ಹರಿಶ್ಚಂದ್ರ ಸಿನಿಮಾದ ಪಾತ್ರ ಕೂಡ ಒಂದು. ಈ ಸಿನಿಮಾದ ಪಾತ್ರ ಶಂಕರ್ ಅವರಿಗೆ ಸ್ಟಾರ್ ಇಮೇಜ್ ತಂದುಕೊಟ್ಟಿತ್ತು. ಭೂತಯ್ಯನ ಮಗ ಅಯ್ಯು ಚಿತ್ರದ ಅಯ್ಯು ಪಾತ್ರ, ನಾಗರಹಾವು ಚಿತ್ರದ ಪೈಲ್ವಾನ್ ಪಾತ್ರದಿಂದ ಎಂಪಿ ಶಂಕರ್ ಸಿನಿಪ್ರಿಯರ ಮನಗೆದ್ದಿದ್ದರು. ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ ಮುಂತಾದ ಕೆಲವು ಪ್ರಮುಖ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.