ಸಿಂಧನೂರು: ವಾಲ್ಮೀಕಿ ನಾಯಕ ಬೇಡ 7.5 ಎಸ್ಟಿ ಮೀಸಲಾತಿ ಸಲುವಾಗಿ ಸಿಂಧನೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆದಿದ್ದರು.
ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 90 ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆದಿದ್ದು ಮುಂದಿನ ಹೋರಾಟದ ಬಗ್ಗೆ ರೂಪರೇಷೆಗಳನ್ನು ಸಮಾಜದ ಎಲ್ಲರಿಗೆ ತಿಳಿಸಲು ಇಂದು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
ಇವತ್ತು ಸಭೆಯಲ್ಲಿ ತಾಲೂಕಿನ ಸಮಾಜದ ಅಧ್ಯಕ್ಷರಾದ ಯಂಕೋಬ ನಾಯಕರ ರಾಮತ್ನಾಳ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಅಯ್ಯನ ಗೌಡ ಆಯನೂರು, ಸಿಂಧನೂರು ತಾಲೂಕಿನ ಮಾಜಿ ಸಮಾಜದ ಅಧ್ಯಕ್ಷರಾದ ಹನುಮಂತಪ್ಪ ಫುಲ್ ದಿನ್ನಿ, ನಮ್ಮ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ವೆಂಕಟೇಶ್ ನಾಯಕ, ರಾಗಲಪರ್ವಿ, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಆಂಜನೇಯ, ರಾಗಲಪರ್ವಿ ನಮ್ಮ ಸಮಾಜದ ತಾಲೂಕ ಉಪಾಧ್ಯಕ್ಷರಾದ ಮಲ್ಲಯ್ಯ ನಾಯಕ ಹರೆತ್ನುರ್, ಸಮಾಜದ ಮುಖಂಡರಾದ ಕನಕಪ್ಪ ನಾಯಕ, ಸಮಾಜದ ಮುಖಂಡರಾದ ಶಿವಪ್ಪನಾಯಕ ತಿಪ್ಪನಹಟ್ಟಿ, ತಾಲೂಕ ಸಮಾಜದ ಸದಸ್ಯರಾದ ತಿಮ್ಮಪ್ಪನಾಯಕ, ಹುಡಾ ಚೆನ್ನಪ್ಪ ನಾಯಕ ಜವಳಗೇರಾ, ವಾಲ್ಮೀಕಿ ಸಮಾಜದ ಪತ್ರಕರ್ತರಾದ ಯಂಕೋಬ ನಾಯಕ, ಜವಳಗೇರಾ ಸಮಾಜದ ರಮೇಶ್ ನಾಯಕ ಬೆಳಗುರ್ಕಿ, ಸಮಾಜದ ಇತರ ಮುಖಂಡರೆಲ್ಲರೂ ಸಭೆಯಲ್ಲಿ ಭಾಗವಹಿಸಿದ್ದರು