ಬೆಂಗಳೂರು: ಧರಣಿ ಸತ್ಯಾಗ್ರಹದ 90ನೇ ದಿನದ ಅಂಗವಾಗಿ ಇಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ SC/ST ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ಹಂತದ ಹೋರಾಟಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ದ್ಯಾವಪ್ಪ ನಾಯಕ ರವರು ಮಾತನಾಡಿ ಸ್ವಾಮೀಜಿ ರವರ ಮೊದಲ ದಿನದ ಧರಣಿ ಇಂದ ಇಂದಿನ 90ನೇ ದಿನದ ಹೋರಾಟದ ಬಗ್ಗೆ ವಿವರಣೆ ನೀಡಿ 15-05-2022ರ ಪತ್ರಿಕಾಗೋಷ್ಠಿ ಮತ್ತು 20-05-2022 ರಂದು ಪ್ರತೀ ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ತಹಸೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದ್ಯಾವಪ್ಪ ನಾಯಕರು, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರ್, ಬ್ಯಾಂಕ್ ನಿವೃತ್ತ ನೌಕರರಾದ ನಾರಾಯಣ ಸ್ವಾಮಿ, ನಿವೃತ್ತ ಎಸಿಪಿ ಶಶಿಕುಮಾರ್, ರೈಲ್ವೆ ಸಿದ್ದಯ್ಯ, ಪಿ ದೇವರಾಜು, ದಲಿತ ಮುಖಂಡರಾದ ಪುಟ್ಟ ನಂಜಯ್ಯ, ನಾಗನಹಳ್ಳಿ ರೇವಣ್ಣ, ರಾಷ್ಟ್ರಕ್ರಾಂತಿ ಮಹದೇವ್ , ಕೈಗಾರಿಕೆ ಮಂಜುನಾಥ್, ರಾಜು ಮಾರ್ಕೆಟ್, ಚನ್ನಾನಾಯಕ ಕೋಟೆ, ಹದಿನಾರು ಪ್ರಕಾಶ್, ಕೃಷ್ಣ, ವಿನೋದ್ ನಾಗವಲ, ಅರುಣ್, ಕೆರೆಹಳ್ಳಿ ಮಾದೇಶ್ ಉಪಸ್ಥಿತರಿದ್ದರು.