ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿಯಿದೆ. ಜೆಡಿಎಸ್ನ ಬಂಡೆಪ್ಪ ಕಾಶಂಪೂರ್ ಸೇರಿ ಹಲವರು ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿವೆ. ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್ಗಳು ಇದೆ, ಅದರಲ್ಲಿ 16 ಡಿಸಿಸಿ ಬ್ಯಾಂಕ್ ಸಮೀಕ್ಷೆ ಮಾಡಿದ್ದೇನೆ. ಇವತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ಸಮೀಕ್ಷೆ ಮಾಡೋದಕ್ಕೆ ಬಂದಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸಾಲ ತೆಗೆದುಕೊಂಡಿದ್ದಾರೆ, ಜೆಡಿಎಸ್ನಿಂದ ಬಂಡೆಪ್ಪ ಕಾಂಶಪೂರ್ ಸಾಲ ತೆಗೆದುಕೊಂಡಿದ್ದಾರೆ. ಎಸ್.ಆರ್.ಪಾಟೀಲ್ ಕೂಡ ತೆಗೆದುಕೊಂಡಿದ್ದಾರೆ. ಯಾರೂ ಸಾಲ ಕಟ್ಟಿಲ್ಲ, ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಯಾರದು ಎಷ್ಟು ಸಾಲ ಬಾಕಿಯಿದೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ ಎಂದರು
ಒಟ್ಟಾರೆ 23 ಜನರು ಸಾಲ ಪಡೆದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ನಿಂದ ಒಟ್ಟು 1,024 ಕೋಟಿ ಸಾಲ ನೀಡಿದ್ದಾರೆ. ಯಾರಿಗೆ ಸಾಲ ಕೊಟ್ಟಿದ್ದಾರೆ, ಸಾಲ ನೀಡಲ್ಲ ಅವರಿಗೆ ನೋಟಿಸ್ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಸೀರಿಯಸ್ ಆಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಎಲ್ಲರೂ ಇದ್ದಾರೆ, ಕಾಂಗ್ರೆಸ್ನವರು ಇದ್ದಾರೆ. ಬಿಜೆಪಿ ಅವರು ಇದ್ದಾರೆ, ಜೆಡಿಎಸ್ನವರೂ ಇದ್ದಾರೆ ಎಂದರು.
.