ಬೆಂಗಳೂರು: ಆಜಾನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಪೊಲೀಸರು ಅದನ್ನು ಪಾಲಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಮ್ಮ ಪಕ್ಷದ ಅಲ್ಪಸಂಖ್ಯಾತರ ನಿಯೋಗ ಸಿಎಂ ಭೇಟಿ ಮಾಡಿದೆ. ಬೇಕೆಂದೇ ಕೆಣಕಿಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಇದು ಸರ್ಕಾರದ ಜವಬ್ದಾರಿ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹಸಚಿವರು ಜವಾಬ್ದಾರಿ ವಹಿಸಬೇಕು. ಅವರು ಶಾಂತಿಯನ್ನ ಕಾಪಾಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದರು.
ನಳೀನ್ ಕುಮಾರ್ ಕಟೀಲ್ ಅವರ ಮಕ್ಕಳಿಗೆ ಮಸಿ ಬಳಿದುಕೊಂಡು ಕೂರಲಿ. ಅವರಿಗೆ ಮುಖ ತೋರಿಸೋಕೆ ಆಗ್ತಿಲ್ಲ. ಜನ ಉಗಿಯುತ್ತಿದ್ದಾರೆ. ಅವರ ಮುಖ ಮೊದಲು ತೊಳೆದುಕೊಳ್ಳಲಿ. ನಮ್ಮದೇನು ಹೇಳ್ತಾರೆ, ಎಂದು ಟಾಂಗ್ ನೀಡಿದರು.