ಬಾಗಲಕೋಟೆ: ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಶ್ರೀರಾಮ ಸೇನೆ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ವಿಷಯಗಳು ಬೃಹದಾಕಾರವಾಗಿ ಬೆಳೆಯಲು ಸಕಾ೯ರ ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ನಿಲ್ಲಿಸಬೇಕು. ಸಮಾಜದ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡಲಿಕ್ಕಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬೆಳಿಗ್ಗೆಯಿಂದ ನೋಡಿದ್ದೇನೆ. ಇದು ರಾಮ ಸೇನೆನೋ, ರಾವಣನ ಸೇನೆನೋ ಇದೊಂದು ಕಡೆ ಇರಲಿ. ಇವತ್ತಿನಿಂದ ಶುರು ಮಾಡಿದ್ದಾರಾ ಹನುಮಾನ ಚಾಲೀಸಾ? ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಪ್ರಮಾಣದಲ್ಲಿ ಸ್ಪೀಕರ್ ಇರಲಿ. ಸರ್ಕಾರ ಇದಕ್ಕೆ ಪರ್ಮಿಷನ್ ಕೊಟ್ಟು ಬಿಡಲಿ. ಇದಕ್ಕೇನು ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ ಎಂದರು.
ಬಿಜೆಪಿ ಸರ್ಕಾರ ನಡೀತಿರೋದು, ನಾಡಿನ ಖಜಾನೆ ಲೂಟಿ ಮಾಡಿ ದೆಹಲಿಗೆ ಕಳಿಸೋಕೆ ಇರೋದು. ನಾನು ಪ್ರಧಾನ ಮಂತ್ರಿಗಳು ಮೇಲೆ ಚರ್ಚೆ ಮಾಡಲ್ಲ.. ಅವರನ್ನ ಬಿಟ್ಟು ಕೆಲ ಮುಖಂಡರು, ಚುನಾವಣೆ ತಂತ್ರಗಾರಿಕೆಗೆ ಮಾಡೋರು ಇದ್ದಾರಲ್ಲ ಅವರ ಜೊತೆ ಇರೋರು ಪರಿಶುದ್ಧರಿಲ್ಲ. ಬಿಜೆಪಿ ಅನ್ನೋದು ಭ್ರಷ್ಟ ಜನರ ಸರ್ಕಾರ ಆಗಿದೆ. ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ ಇದು. 40 ಮಂದಿಯ ಕಳ್ಳರ ಸರ್ಕಾರ ಇದು ಎಂದು ಕಿಡಿಕಾರಿದರು.