ಬೆಂಗಳೂರು: ದಕ್ಷತೆಯಿಂದ ಸಮಯ ಬದ್ಧವಾಗಿ ಕೆಲಸ ಕಾರ್ಯ ಮಾಡಿ ಎಂದು ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಯಾವ ರೀತಿ ಜಿಲ್ಲಾ ಆಡಳಿತ ಚುರುಕುಗೊಳಿಸಬೇಕು ಹಾಗೂ ಜನ ಪರವಾಗಿ ಇರಬೇಕು ಮತ್ತು ದಕ್ಷತೆಯಿಂದ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು ಎಂದು ಸಿಇಓಗಳಿಗೆ ಸೂಚಿಸಿದರು.
ಸಭೆಯ ಬಳಿಕ ಮಾತನಾಡಿದ ಸಿಎಂ ‘ವಸತಿ, ಪಡಿತರ ಹಂಚಿಕೆ, ರಸ್ತೆ, ಶಾಲೆ, ಆಸ್ಪತ್ರೆ ನಿರ್ಮಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನೆಗಳ ಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಗಿದೆ. ದಕ್ಷತೆಯಿಂದ ಸಮಯ ಬದ್ಧವಾಗಿ ಕೆಲಸ ಕಾರ್ಯ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.