ಬೆಂಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಗಳು ಹೊಸ ಹೋರಾಟ ಆರಂಭಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಜನ ನೆಮ್ಮದಿಯ ಜೀವನ ಬಯಸುತ್ತಿದ್ದಾರೆ. ಕೆಲವು ಸಂಘಟನೆಗಳು ಸಾಮರಸ್ಯ ಹಾಳು ಮಾಡುತ್ತಿವೆ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸುತ್ತಾರೆ. ಪ್ರತಿಯೊಂದಕ್ಕೂ ಜಾತಿ, ಧರ್ಮ, ಪಕ್ಷ ತರಬೇಡಿ ಎಂದು ಮನವಿ ಮಾಡಿದ್ದಾರೆ.
ಆಜಾನ್ ವಿರುದ್ಧ ಸಮರ ಸಾರಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಗ್ಗೆ ರಾಜ್ಯದ ಹಲವು ದೇವಾಲಯಗಳಲ್ಲಿ ಸುಪ್ರಭಾತ, ಭಕ್ತಿಗೀತೆ ಪಠಣ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂ ಸಂಘಟನೆಗಳು ಹೊಸ ಹೋರಾಟ ಆರಂಭಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ರಾಜ್ಯದ ಅಭಿವೃದ್ಧಿ, ದೇಶದ ಅಭಿಮಾನ ಮುಖ್ಯ. ಜಾತಿಯನ್ನು ಮಧ್ಯೆ ತರಲುಹೋಗಬೇಡಿ. ಶಬ್ದ ಮಾಲಿನ್ಯದ ನಿಯಮ ಪಾಲಿಸುವಂತೆ ಸರ್ಕಾರ ಹೇಳಲಿ. ಆಗ ಎಲ್ಲರೂ ಅದನ್ನ ಪಾಲಿಸುತ್ತಾರೆ. ನಮ್ಮ ಮಕ್ಕಳಾದರೂ ನೆಮ್ಮದಿಯಿಂದ ಬದುಕಲಿ ಅದಕ್ಕೆ ನೀವೆಲ್ಲರೂ ಸಹಕಾರ ಕೊಡಿ ಎಂದರು.