ನವದೆಹಲಿ: ಸ್ವಾತಂತ್ರ ಬಂದು 75 ವರ್ಷಗಳಾಗಿವೆ ಇನ್ನಾದರೂ ವಿದೇಶಿ ವಸ್ತುಗಳ ಗುಲಾಮಗಿರಿ ಕಡಿಮೆ ಮಾಡಿ ಆತ್ಮ ನಿರ್ಭರತೆಗೆ ಪ್ರಾಶಸ್ತ್ಯ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜೈನ್ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್‌ನ ಜೀಟೋ ಕನೆಕ್ಟ್-202 ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ “ಇಂದು ದೇಶದಲ್ಲಿ ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ದೇಶದಾದ್ಯಂತ ಪ್ರತಿದಿನ ಹತ್ತಾರು ಸ್ಟಾರ್ಟಪ್‌ಗಳು ನೊಂದಾವಣೆಯಾಗುತ್ತಿದೆ. ವಾರಕ್ಕೊಂದು ಯುನಿಕಾರ್ನ್ ಹುಟ್ಟಿಕೊಳ್ಳುತ್ತಿದೆ” ಎಂದು ಹೇಳಿದರು.
ಸ್ವಾವಲಂಬಿ ಭಾರತದ ನಿರ್ಮಾಣ ನಮ್ಮ ಸಂಕಲ್ಪ. “ಜೆಮ್ ಪೋರ್ಟಲ್ ಮೂಲಕ ಈಗ ದೂರದ ಹಳ್ಳಿಗಳ ಜನರು, ಸಣ್ಣ ಅಂಗಡಿಕಾರರು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು.