ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡ ವಾಲ್ಮೀಕಿ ಸಮುದಾಯದ ಕುಟುಂಬದ ಮೇಲೆ ಮರಣತಿಕ ಹಲ್ಲೆ ಮಾಡಿದ್ದು ಸ್ಥಳಕ್ಕೆ, ವಾಲ್ಮೀಕಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘಟನೆ ಅಧ್ಯಕ್ಷರು ಮಂಜುಳ ಶ್ರೀನಿವಾಸ್ ಭೇಟಿ ನೀಡಿದರು.
ಸಮಾಜ ಕಲ್ಯಾಣ ಅಧಿಕಾರಿಗಳನ್ನು ಕರೆಸಿನೊಂದ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಶೀಘ್ರ ನೀಡಬೇಕು ಎಂದು ತಿಳಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ನಿಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದರು.
ನಂತರ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ವಾದ ರೀತಿ ಕೇಸ್ ದಾಖಲಿಸಿ ನ್ಯಾಯ ದೊರಕಿಸಿ ಎಂದು ತಾರಾಟೆಗೆ ತೆಗೆದುಕೊಂಡರು. ಈ ಸಮಯದಲ್ಲಿ ವಾಲ್ಮೀಕಿ ಯುವಕರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ರಾಜ್ಯ ಯುವ ಘಟಕದ ವೆಂಕಟ್, ಕೋಲಾರ ಜಿಲ್ಲಾ ಅಧ್ಯಕ್ಷರು ನಾಗರಾಜ್, ಶ್ರೀನಿವಾಸಪುರ ಅಧ್ಯಕ್ಷರು ಲಕ್ಷ್ಮೀನಾರಾಯಣ, ಅಂಜಿನಪ್ಪ, ಇನ್ನು ಸಮುದಾಯದ ಮುಂತಾದವರು ಇದ್ದರು.