ಯಶ್ ಅಭಿನಯದ ಕೆಜಿಎಫ್– 2 ಚಿತ್ರ ಬಾಕ್ಸ್ ಆಫೀಸ್ ಉಡೀಸ್ ಮಾಡಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ.
ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ. ಕ್ಲಬ್ ಸೇರಲು ಹತ್ತಿರವಾಗುತ್ತಿದೆ. ಅಷ್ಟೇ ಅಲ್ಲ, ಈ ಸಿನಿಮಾದ ಹಿಂದಿ ಡಬ್ ದಾಖಲೆಗಳನ್ನು ಸಹ ಮುರಿಯುತ್ತಿದೆ. ಕೇವಲ 11 ದಿನಗಳಲ್ಲಿ ಈ ಚಿತ್ರ 300 ಕೋಟಿ ಕ್ಲಬ್ಗೆ ಪ್ರವೇಶಿಸಿತ್ತು. ಇದೀಗ, 14 ದಿನಗಳಲ್ಲಿ ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಇದರರ್ಥ ಕೆಜಿಎಫ್ 2, ಪಿಕೆ, ಸಂಜು ಮತ್ತು ಟೈಗರ್ ಜಿಂದಾ ಹೈ ನಂತಹ ಕೆಲವು ದೊಡ್ಡ ಬಾಲಿವುಡ್ ಚಲನಚಿತ್ರಗಳನ್ನು ಹಿಂದಿಕ್ಕಿದೆ..