ಮೈಸೂರು: ಮೈಸೂರಿನಲ್ಲಿ ನಾವು ತಿನ್ನುವ ಅನ್ನದಿಂದ ಕೊಡುವ ನೆರಳು ಕೂಡ ಮಹಾರಾಜರ ಕೊಡುಗೆ. ದೇವರಾಜ ಮಾರುಕಟ್ಟೆ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಧ್ವನಿ ಎತ್ತಿದ್ದಾರೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಭೇಟಿ ಮಾಡಿ ಸಲಹೆ ಪಡೆಯುತ್ತೇವೆ. ಅವರ ಜೊತೆ ಮಾತುಕತೆ ಬಳಿಕ ದೇವರಾಜ ಮಾರುಕಟ್ಟೆ ವಿಚಾರದಲ್ಲಿ ಮುಂದುವರೆಯುತ್ತೇವೆ ಎಂದರು.
ಯಾವುದೇ ರಾಜಕಾರಣಿಗೆ ಕ್ಷೇತ್ರವನ್ನು ಐದು ವರ್ಷ ಬರೆದುಕೊಟ್ಟಿರಲ್ಲ. ನಾವು ಗೆದ್ದ ಮೇಲೆ ಜನಾಭಿಪ್ರಾಯದಂತೆ ಮುಂದುವರೆಯಬೇಕು ಎಂದು ಶಾಸಕ ಎಲ್.ನಾಗೇಂದ್ರಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ದೇವರಾಜ ಮಾರುಕಟ್ಟೆ ಚಾಮರಾಜ ಶಾಸಕ ಎಲ್.ನಾಗೇಂದ್ರ ವ್ಯಾಪ್ತಿಗೆ ಬರುತ್ತದೆ. ದೇವರಾಜ ಮಾರುಕಟ್ಟೆ ತೆರವು ವಿಚಾರವಾಗಿ ಇದೀಗ ಶಾಸಕ ಎಲ್.ನಾಗೇಂದ್ರ ಹಾಗೂ ಪ್ರತಾಪ್ ಸಿಂಹ ವಾಕ್ಸಮರ ಏರ್ಪಟ್ಟಿದೆ.