ತುಮಕೂರು: ನಾವು ಹೇಳಿರುವ ಎಲ್ಲಾ ಯೋಜನೆಗಳನ್ನು ಪೂರ್ಣ ಮಾಡಲಿಲ್ಲ ಎಂದರೆ, ಜಾತ್ಯಾತೀತ ಜನತಾದಳವನ್ನೇ ವಿಸರ್ಜನೆ ಮಾಡುತ್ತೇವೆ. ಮತ್ತೆ ನಿಮ್ಮ ಮುಂದೆ ಮತ ಕೇಳಲು ಬರುವುದಿಲ್ಲ. ತೀರ್ಮಾನಗಳನ್ನು ನನ್ನ ನಾಡಿನ ಜನಕ್ಕೆ ಬಿಟ್ಟಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಕೋವಿಡ್ ಸಂದರ್ಭದಲ್ಲಿ ನಾವು ಸುಮ್ಮನೇ ಕೂತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಪ್ರಮುಖವಾಗಿ ಐದು ಕಾರ್ಯಕ್ರಮಗಳ ಯೋಜನೆಯನ್ನು ಮಾಡಿದ್ದೇವೆ. ಒಂದು ಶಿಕ್ಷಣ, ಮತ್ತೊಂದು ಆರೋಗ್ಯ, ನೀರಾವರಿ ಯೋಜನೆ ಹೀಗೆ ಹಲವು ಯೋಜನೆಗಳನ್ನು ಮಾಡಿದ್ದೇವೆ ಎಂದರು.
ಇನ್ನು ಉಚಿತ ಆರೋಗ್ಯ ಸೇವೆ. ಪ್ರತಿ ಗ್ರಾಮೀಣ ಮಟ್ಟದಲ್ಲಿ 24 ಗಂಟೆ ವೈದ್ಯರು ಸೇವೆ ಮಾಡುವಂತಹ ಯೋಜನೆ ರೂಪಿಸಿದ್ದೇವೆ. ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆರೋಗ್ಯ ಸೇವೆ ಒದಗಿಸುತ್ತೇವೆ. ಹಾಗಾಗಿ ನೀವು ಆಶೀರ್ವಾದ ಮಾಡಿ ಐದು ವರ್ಷದ ಸರ್ಕಾರವನ್ನು ನೀಡಿದರೆ. ಜನರ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.