ಬೆಳಗಾವಿ: ದೇಶದಲ್ಲಿ ಆಯಾ ಪ್ರದೇಶ, ರಾಜ್ಯಗಳಲ್ಲಿ ಮಾತೃಭಾಷೆ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆ. ಕನ್ನಡ ಭಾಷೆ ನಮಗೆ ತಾಯಿ ಸಮಾನ. 2500 ಸಾವಿರ ವರ್ಷದಿಂದ ಈ ನಾಡಿನಲ್ಲಿ ಕನ್ನಡ ಉಳಿಸುವ ಹಾಗೂ ಬೆಳೆಸುವ ಕೆಲಸ ಅನೇಕರು ಮಾಡಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಕನ್ನಡ ಭಾಷೆ ಇರುತ್ತದೆ ಎಂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಯಿಸಿದ್ದಾರೆ.
ಬ್ರಿಟಿಷರು, ಮುಸ್ಲಿಮರು, ಪೋರ್ಚುಗೀಸರು ಸೇರಿ ಪರಕೀಯರು ಆಳಿದ್ದಾರೆ. ಆದರೂ ಸಹ ಕನ್ನಡ ಭಾಷೆ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ಮತ್ತು ಮಾತೃ ಭಾಷೆ ಶಾಶ್ವತವಾಗಿ ಇರುತ್ತದೆ ಎಂದಿದ್ದಾರೆ.