ಬೆಂಗಳೂರು: 23 ವರ್ಷದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದಾನೆ.
ನಾಗೇಶ್ ತನ್ನನ್ನು ಪ್ರೀತಿಸುವಂತೆ ಹಲವು ದಿನಗಳಿಂದ ಯುವತಿಯ ಹಿಂದೆ ಬಿದ್ದಿದ್ದ. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ನಾಗೇಶ್, ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ.
ಕೆಲಸಕ್ಕೆಂದು ಯುವತಿಯನ್ನು ಆಕೆಯ ತಂದೆ ಬೈಕ್‍ನಲ್ಲಿ ಕರೆದುಕೊಂಡು ಹೋಗಿ ಮುತ್ತೂಟ್ ಫಿನ್ ಕಾರ್ಪ್ ಬಳಿ ಬಿಟ್ಟು ಹೋಗಿದ್ದರು. ತಂದೆ ಡ್ರಾಪ್ ಮಾಡಿದ್ದ ಕೆಲವೇ ಹೊತ್ತಲ್ಲಿ ನಾಗೇಶ್ ಯುವತಿ ಮೇಲೆ ಆ್ಯಸಿಡ್ ಹಾಕಿದ್ದಾನೆ. ಘಟನೆಯಿಂದ ತೀವ್ರ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.