ಮೈಸೂರು: ಟಿ.ನರಸೀಪುರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 11 ಗಂಟೆಗೆ ರೈತರ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು. ಆದರೆ ಗಂಟೆ 12 ಆದರೂ ಸಭೆ ಆರಂಭವಾಗಿರಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸಿದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶಗೊಂಡರು.
ತಹಶೀಲ್ದಾರ್ ಗಿರಿಜಾರನ್ನು ತರಾಟೆಗೆ ತೆಗೆದುಕೊಂಡ ರೈತ ಮುಖಂಡರು, ಸಚಿವರು, ಶಾಸಕರು ಬಂದರೆ ನಿಗದಿತ ಸಮಯಕ್ಕೂ ಮುನ್ನಾ ಹಾಜರಾಗುತ್ತೀರಿ. ಆದರೆ ರೈತರ ಕುಂದು ಕೊರತೆ ಸಭೆಗೆ ಯಾಕೆ ಅಧಿಕಾರಿಗಳು ಹಾಜರಾಗಲ್ಲ. ರೈತರನ್ನು ಕಂಡರೆ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಕಿಡಿಕಾರಿದರು.